ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇಂದು ಸಂಜೆ 5 ಗಂಟೆಯಿಂದ ಡಿಸೆಂಬರ್ 22ರ ಸಂಜೆ 5 ಗಂಟೆಯವರೆಗೆ ನಿಷೇಧ ಹೇರಲಾಗಿದೆ.
ಓದಿ: ಬಿಜೆಪಿ ಪದಾಧಿಕಾರಿಗಳ ಸಭೆ: ಕಾಂಗ್ರೆಸ್ ವಿರುದ್ಧ ಕಟೀಲ್, ಸಿಟಿ ರವಿ ವಾಗ್ದಾಳಿ
ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಡಿ. 25ರ ಸಂಜೆ 5ಗಂಟೆಯಿಂದ ಡಿ.27ರ ಸಂಜೆ 5 ಗಂಟೆಯವರೆಗೆ ಸಿಆರ್ಪಿಸಿ ಕಾಯ್ದೆ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಅಡಿ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆ ಆದೇಶವನ್ನು ಹೊರಡಿಸಿದ್ದಾರೆ..