ಧಾರವಾಡ: ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿಯನ್ನು ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮಸ್ಥರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
![villagers rescued a man](https://etvbharatimages.akamaized.net/etvbharat/prod-images/8304860_dharwad.jpg)
ನಿರಂತರ ಮಳೆಯಿಂದ ನವಲಗುಂದ ತಾಲೂಕಿನ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ. ಮಲ್ಲಪ್ಪ ವಟ್ನಾಳ ಎಂಬಾತ ಈ ಹಳ್ಳದಲ್ಲಿ ನೀರಿನ ರಭಸಕ್ಕೆ ಸಿಲುಕಿ ತೇಲಿ ಹೋಗುತ್ತಿದ್ದ. ಇದನ್ನು ಗಮನಿಸಿದ ಮೊರಬ ಗ್ರಾಮಸ್ಥರು ಹಳ್ಳಕ್ಕೆ ಇಳಿದು ಹಗ್ಗ ಬಿಟ್ಟು ಮಲ್ಲಪ್ಪನನ್ನು ರಕ್ಷಣೆ ಮಾಡಿದ್ದಾರೆ.