ಹುಬ್ಬಳ್ಳಿ: ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಆರೋಪಿಗೆ ಇಲ್ಲಿನ 1ನೇ ಜೆಎಂಎಫ್‌ಸಿ ಕೋರ್ಟ್ ಜೀವಾವಧಿ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸುತಗಟ್ಟಿ ನಿವಾಸಿ ಈರಣ್ಣಾ ಬಸವರಾಜ ಕಮ್ಮಾರನಿಗೆ 1ನೇ ಜೆಎಂಎಫ್‌ಸಿ ಕೋರ್ಟ್ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. 2013ರ ಮೇ 21ರಂದು ಈರಣ್ಣಾ ನವಲಗುಂದದ ವಿಜಯಲಕ್ಷ್ಮೀ ಅವರನ್ನು ವಿವಾಹವಾಗಿದ್ದರು. ವರದಕ್ಷಿಣೆಗಾಗಿ ಪತ್ನಿಗೆ ಹಿಂಸೆ ನೀಡುತ್ತಿದ್ದ ಅವನು, 2016 ರ ಮಾರ್ಚ್ 12 ರಂದು ಪತ್ನಿಯನ್ನು ಕೊಲೆ ಮಾಡಿ, ಸುತಗಟ್ಟಿ ಗ್ರಾಮದ ಹೊಲವೊಂದರಲ್ಲಿ ಸುಟ್ಟು ಹಾಕಿದ್ದ.
ಈ ಪ್ರಕರಣ ಕುರಿತು ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಮಂಗಳವಾರ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸರೋಜಾ ಹೊಸಮನಿ ವಾದ ಮಂಡಿಸಿದರು.