ಧಾರವಾಡ: 49 ಶಂಕಿತರ ಪೈಕಿ 35 ಮಂದಿ ವರದಿ ನೆಗೆಟಿವ್ ಬಂದಿದೆ. ನಿನ್ನೆ ಒಟ್ಟು 49 ಮಂದಿ ವರದಿ ಪರೀಕ್ಷೆಗೆ ಕಳಿಸಲಾಗಿತ್ತು. ಇನ್ನೂ 14 ಜನರ ವರದಿ ಬಾಕಿಯಿದೆ.
ಇಂದು ಮತ್ತೆ ಹೆಚ್ಚುವರಿಯಾಗಿ 51 ಮಂದಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಒಟ್ಟು 65 ಜನರ ವರದಿಗೆ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 1,015 ಮಂದಿ ಮೇಲೆ ನಿಗಾವಹಿಸಲಾಗಿದೆ.
![Corona Suspects Report Negative](https://etvbharatimages.akamaized.net/etvbharat/prod-images/kn-dwd-7-health-bulletine-av-ka10001_14042020184845_1404f_1586870325_1058.jpg)
14 ದಿನಗಳ ಹೋಮ್ ಐಸೋಲೇಷನ್ನಲ್ಲಿ 316 ಜನರಿದ್ದಾರೆ. ಆಸ್ಪತ್ರೆಯಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 183 ಮಂದಿಯಿಂದ 14 ದಿನ ಮತ್ತು 508 ಮಂದಿಯಿಂದ 28 ದಿನಗಳ ಹೋಮ್ ಕ್ವಾರಂಟೈನ್ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ 5 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಅವರು ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 507 ಮಂದಿಯ ಪೈಕಿ 437 ವರದಿ ನೆಗೆಟಿವ್ ಬಂದಿದೆ.