ETV Bharat / city

ಮಕ್ಕಳ ಸಾವಿನಿಂದ ಮನನೊಂದು ವಿಷ ಸೇವಿಸಿದ ವೃದ್ಧ ದಂಪತಿ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ - Dharwad couple suicide

ಧಾರವಾಡದ ಮನಗುಂಡಿ ಗ್ರಾಮದ ವೃದ್ಧ ದಂಪತಿ ಮಕ್ಕಳ ಸಾವಿನಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Dharwad
ಧಾರವಾಡ
author img

By

Published : Aug 5, 2022, 9:57 AM IST

ಧಾರವಾಡ: ಮಕ್ಕಳ‌ ಸಾವಿನಿಂದ ಮನನೊಂದು ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷ ದೊಡವಾಡ (70) ಮೃತಪಟ್ಟಿದ್ದು, ಪತ್ನಿ ಬಸವ್ವ ದೊಡವಾಡ (60) ಸ್ಥಿತಿ ಗಂಭೀರವಾಗಿದೆ.

ಕೆಲ ವರ್ಷಗಳ ಹಿಂದೆ ದಂಪತಿಯ ಪುತ್ರರು ನಿಧನರಾಗಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ವಿರೂಪಾಕ್ಷ ಹಾಗೂ ಬಸವ್ವ, ಗ್ರಾಮದ ಹೊರವಲಯದ ಅರಣ್ಯ ದಾರಿ ಪಕ್ಕ ವಿಷ ಸೇವಿಸಿದ್ದಾರೆ. ಅಸ್ವಸ್ಥಗೊಂಡ ದಂಪತಿ ಗಮನಿಸಿದ ದಾರಿಹೋಕರು ಕೂಡಲೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪತಿ ವಿರೂಪಾಕ್ಷ ಸಾವನ್ನಪ್ಪಿದ್ದು, ಬಸವ್ವಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಅಣ್ಣ; ಅಂತ್ಯಕ್ರಿಯೆಗೆ ಬಂದ ತಮ್ಮನಿಗೂ ಹಾವು ಕಡಿದು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.