ETV Bharat / city

ಏಳು ದಿನದ ಕಂದಮ್ಮನಿಗೆ ರಕ್ತದಾನ: ಜೀವದಾನ ನೀಡಿದ ಆ್ಯಂಬುಲೆನ್ಸ್​​ ಚಾಲಕ

ಲೈಫ್​ ಲೈನ್ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ರಕ್ತದಾನ ಮಾಡುವ ಮೂಲಕ ಏಳು ದಿನದ ಕಂದಮ್ಮನ ಜೀವ ಕಾಪಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.

ರಕ್ತದಾನ
blood donate
author img

By

Published : Apr 13, 2020, 4:14 PM IST

ಹುಬ್ಬಳ್ಳಿ : ತುರ್ತು ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸಹಾಯ ಅತಿ ಅವಶ್ಯಕವಾಗಿರುತ್ತದೆ. ಅಂಬ್ಯುಲೆನ್ಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ‌ ಅದೆಷ್ಟೋ ಜನರು ಪುನರ್​ ಜನ್ಮ ಪಡೆದುಕೊಂಡಿದ್ದಾರೆ. ಅದೇ ರೀತಿ ವೃತ್ತಿಯ ಜೊತೆಗೆ ರಕ್ತದಾನ ಮಾಡುವ ಮೂಲಕ ಆ್ಯಂಬುಲೆನ್ಸ್​​ ಚಾಲಕ ಏಳು ದಿನದ ಕಂದಮ್ಮನ ಜೀವ ಕಾಪಾಡಿದ್ದಾರೆ.

ರಕ್ತದಾನ ಮಾಡಿದ ಅಂಬ್ಯುಲೆನ್ಸ್ ಚಾಲಕ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ 7 ದಿನದ ಮಗುವಿಗೆ ಒಂದು ಯೂನಿಟ್ B +ve ಪ್ಲೇಟ್ಲೆಟ್ (RDP) ಬೇಕಾಗಿತ್ತು. ಇದಕ್ಕೆ ಸ್ಪಂದಿಸಿದ ಕರ್ತವ್ಯದ ಮೇಲೆ ಇದ್ದ ಆಂಬುಲೆನ್ಸ್ ಚಾಲಕ ಮುಸ್ತಾಕ್ ಎಂಬುವವರು ಲೈಫ್ ಲೈನ್ ರಕ್ತನಿಧಿಯಲ್ಲಿ ರಕ್ತದಾನ ಮಾಡಿ ಸಹಾಯ ಮಾಡಿದ್ದಾರೆ.

ಲಾಕ್ ಡೌನ್ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ರಕ್ತದಾನ ಮಾಡುವ ಮೂಲಕ ಲೈಫ್​ ಲೈನ್ ಆಸ್ಪತ್ರೆಯ ಆ್ಯಂಬುಲೆನ್ಸ್​​ ಚಾಲಕ ಏಳು ದಿನದ ಕಂದಮ್ಮನ ಜೀವ ಕಾಪಾಡಿದ್ದಾರೆ. ಒಟ್ಟಿನಲ್ಲಿ ಕರ್ತವ್ಯದ ಜೊತೆಗೆ ಕಂದಮ್ಮನ ಜೀವನ ಕಾಪಾಡಲು ರಕ್ತ ದಾನ ಮಾಡಿರುವ ಮುಸ್ತಾಕ್ ಅವರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.