ಹುಬ್ಬಳ್ಳಿ: ತನ್ನ ತಾಯಿಯನ್ನ ನಿಂದಿಸಿದ ಎಂಬ ಕಾರಣಕ್ಕೆ ಯುವಕನೋರ್ವ 9 ಜನರೊಂದಿಗೆ ಸೇರಿ ಯುವಕನನ್ನು(ನಿಂದಿಸಿದ ಯುವಕ) ಕೊಲೆ ಮಾಡಲು ಯತ್ನಿಸಿದ ಪ್ರಕರಣ ಇಲ್ಲಿನ ಉದಯ ನಗರ ಕ್ರಾಸ್ ಬಳಿ ನಡೆದಿದೆ.
ಪ್ರಕರಣದ ವಿವರ: ಗೋಪನಕೊಪ್ಪದ ಕಡೆ ಓಣಿಯ ಮಂಜುನಾಥ ಮಟಿವಾಳರ ಎಂಬುವವರ ತಾಯಿಗೆ ಮಂಕನಗೌಡ ಎಂಬ ಯುವಕ ನಿಂದಿಸಿದ್ದನಂತೆ. ಇದರಿಂದ ಸಿಟ್ಟಾದ ಮಂಜುನಾಥ ನಿನ್ನ(ಭಾನುವಾರ) ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಎಗ್ರೈಸ್ ತಿನ್ನುವ ಸಂದರ್ಭದಲ್ಲಿ ಮಂಜುನಾಥ ಮಡಿವಾಳ, ಮಂಕನಗೌಡ ಪಾಟೀಲ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಬಳಿಕ ಮಂಕನಗೌಡ ತನ್ನ ತನ್ನ 9 ಮಂದಿ ಗೆಳೆಯರೊಂದಿಗೆ ಮಂಜುನಾಥ ಮಡಿವಾಳಪ್ಪನನ್ನು ಅಪಹರಿಸಿ ಉದಯ ನಗರ ಕ್ರಾಸ್ ಬಳಿಯ ಖಾಲಿ ಜಾಗದಲ್ಲಿ ಕಲ್ಲು ಹಾಗೂ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗ್ತಿದೆ.
ಈ ಕುರಿತು ಬಸವರಾಜ ಭಜಂತ್ರಿ, ಕಿರಣ ಮಾನೆ, ಮಾರುತಿ ಪೂಜಾರಿ, ಪ್ರಭು, ಈರಣ್ಣ ಬಟ್ಟೂರ ಹಾಗೂ ಇನ್ನೂ ಮೂವರ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ನಿರಂತರ ಮಳೆಗೆ ಶಾಲೆಗಳ ಗೋಡೆ ಕುಸಿತ; ನದಿ ಪಾತ್ರದ ಜನರಿಗೆ ಎಚ್ಚರಿಕೆ