ETV Bharat / city

ಇಂದು ರಾಜ್ಯಕ್ಕೆ ಕೋವಿಶೀಲ್ಡ್ ಆಗಮನ : ವಿಶೇಷವಾಗಿ ಲಸಿಕೆ ಸ್ವಾಗತಿಸಿದ ಕಲಾವಿದ - ಧಾರವಾಡ ಲೇಟೆಸ್ಟ್​ ನ್ಯೂಸ್​

ಕೋವಿಶೀಲ್ಡ್ ಲಸಿಕೆ ಇಂದು ಕರ್ನಾಟಕಕ್ಕೆ ಬರುತ್ತಿದೆ. ಈ ಹಿನ್ನೆಲೆ ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ವಿಶೇಷವಾಗಿ ಸ್ವಾಗತಿಸಿದ್ದಾರೆ.

a-artist-specialy-welcomed-covishield-vaccine
ಇಂದು ರಾಜ್ಯಕ್ಕೆ ಕೋವಿಶೀಲ್ಡ್ ಲಸಿಕೆ ಆಗಮನ: ವಿಶೇಷವಾಗಿ ಸ್ವಾಗತಿಸಿದ ಕಲಾವಿದ
author img

By

Published : Jan 12, 2021, 12:04 PM IST

ಧಾರವಾಡ: ಕೊರೊನಾದಿಂದ ಕಂಗಾಲಾಗಿದ್ದ ಜನತೆಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್​ ಲಸಿಕೆಗಳು ಸಮಾಧಾನ ತಂದಿವೆ. ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳು ಇಂದು ರಾಜ್ಯಕ್ಕೆ ಬರುತ್ತಿವೆ. ಈ ಹಿನ್ನೆಲೆ, ನಗರದ ಕಲಾವಿದರೊಬ್ಬರು ವಿಶೇಷವಾಗಿ ಸ್ವಾಗತಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆಯನ್ನು ವಿಶೇಷವಾಗಿ ಸ್ವಾಗತಿಸಿದ ಕಲಾವಿದ

ಕೋವಿಶೀಲ್ಡ್ ಲಸಿಕೆ ಕರ್ನಾಟಕಕ್ಕೆ ಬರುತ್ತಿರುವ ಹಿನ್ನೆಲೆ, ಧಾರವಾಡದ ಕೆಲಗೇರಿ ಗಾಯತ್ರಿಪುರ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಯನ್ನು ಸ್ವಾಗತಿಸಿದ್ದಾರೆ.

ಲಸಿಕೆ ನಮ್ಮ ಮಣ್ಣಿನಲ್ಲಿ ಅಂದರೆ ನಮ್ಮ ದೇಶದಲ್ಲೇ ತಯಾರಾಗಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದು, ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ. ಹೀಗಾಗಿ ಕೊರೊನಾ ವಿರುದ್ಧ ಈ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು ಹಾಗೂ ಕೇಂದ್ರ ಸರ್ಕಾರಕ್ಕೆ ಈ ಕಲಾಕೃತಿ ರಚಿಸುವುದರ ಮುಖಾಂತರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಮಂಜುನಾಥ​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.