ಹುಬ್ಬಳ್ಳಿ: ಹುಬ್ಬಳ್ಳಿ ಸ್ಟೇಷನ್ ರಸ್ತೆಯ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಶಂಕರ ಮಿಶ್ರಾ ಅವರಿಗೆ ಬ್ಯಾಂಕ್ ಗ್ರಾಹಕನ ಸೋಗಿನಲ್ಲಿ ಕರೆ ಮಾಡಿ, ಸಂದೇಶ ಕಳುಹಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಗ್ರಾಹಕನ ಸೋಗಿನಲ್ಲಿ ಹಣ ಕೇಳಿದ್ದರಿಂದ ಮಿಶ್ರ ಅವರು 62.30 ಲಕ್ಷ ಹಣ ವರ್ಗಾಯಿಸಿದ್ದರು. ನಂತರ ಅದು ವಂಚನೆ ಎಂದು ತಿಳಿದು ಬಂದಿದೆ.
ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಸುಭಾಸ್ ಜವಳಿ ಎಂಬುವರ ಹೆಸರಿನಲ್ಲಿ ಮಿಶ್ರಾ ಅವರಿಗೆ ವಂಚಕ ಕರೆ ಮಾಡಿದ್ದಾನೆ. ವ್ಯವಹಾರಕ್ಕಾಗಿ ಹಣದ ಅಗತ್ಯವಿದ್ದು, ತುರ್ತಾಗಿ ವರ್ಗಾಯಿಸಬೇಕು ಎಂದು ಹೇಳಿದ್ದಾನೆ. ಅಲ್ಲದೇ ನಕಲಿ ಜಿಮೇಲ್ ಐಡಿಯಿಂದ ಹಣದ ಅಗತ್ಯವಿರುವ ಕುರಿತು ಸಂದೇಶ ಕಳುಹಿಸಿದ್ದ. ಅದನ್ನು ನಂಬಿ ಮಿಶ್ರಾ, ವಂಚಕ ಹೇಳಿದ್ದ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಫೈನಾನ್ಸ್ ಮಾಲೀಕನಿಂದ 200ಕ್ಕೂ ಹೆಚ್ಚು ಜನರಿಗೆ ಪಂಗನಾಮ.. ವ್ಯಾಪಾರಿಗಳಿಗೂ ಕೋಟಿ ಕೋಟಿ ವಂಚನೆ