ಹುಬ್ಬಳ್ಳಿ: ಆನ್‌ಲೈನ್ ಮೂಲಕ ಗ್ಲೌಸ್ ಸರಬರಾಜು ಮಾಡುವುದಾಗಿ ನಂಬಿಸಿ ಅಪರಿಚಿತನೋರ್ವ ನಗರದ ಔಷಧ ವ್ಯಾಪಾರಿಗೆ 1.90 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.
ವಿದ್ಯಾನಗರದ ಎಸ್.ಕೆ. ಶಿರಗುಪ್ಪಿ ಎಂಬುವರು ಎಪಿಎಂಸಿ ಬಳಿಯ ಈಶ್ವರ ನಗರದಲ್ಲಿ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಸರ್ಜಿಕಲ್ ಶಾಪ್ ನಡೆಸುತ್ತಿದ್ದಾರೆ. ಜ.13ರಂದು ಇಂಡಿಯಾ ಮಾರ್ಟ್ ಆನ್‌ಲೈನ್ ಮಾರ್ಕೆಟ್‌ನಲ್ಲಿ ಗ್ಲೌಸ್ಗಳ ಖರೀದಿಗಾಗಿ ಪರಿಶೀಲಿಸಿದ್ದರು. ಜ.14ರಂದು ಅಪರಿಚಿತನೊಬ್ಬ ಶಿರಗುಪ್ಪಿ ಅವರಿಗೆ ಕರೆ ಮಾಡಿದ್ದ.
ಅಹಮದಾಬಾದ್‌ನ ರಿಲೀಫ್ ಮೆಡಿಕಲ್‌ನಿಂದ ಮಾತನಾಡುತ್ತಿದ್ದೇನೆ. ನೀವು ಇಂಡಿಯಾ ಮಾರ್ಟ್‌ನಲ್ಲಿ ಗ್ಲೌಸ್‌ಗಾಗಿ ಪರಿಶೀಲಿಸಿದ್ದೀರಿ. ನಮ್ಮಲ್ಲಿ ಗ್ಲೌಸ್ ಲಭ್ಯವಿದೆ. ಎಷ್ಟು ಪ್ರಮಾಣದ ಗ್ಲೌಸ್ ಬಾಕ್ಸ್ ಬೇಕು ಎಂದೆಲ್ಲಾ ಪರಿಶೀಲಿಸಿದ್ದಾನೆ. ಇದನ್ನು ನಂಬಿದ ಶಿರಗುಪ್ಪಿ ಅವರು 1 ಸಾವಿರ ಬಾಕ್ಸ್ ಗ್ಲೌಸ್ ಖರೀದಿಗೆ ಆರ್ಡರ್ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಎರಡು ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಉದ್ಧಟತನ ಮೆರೆದಿದ್ದ ಕಾರು ಚಾಲಕ ಅಂದರ್
170 ರೂ.ಗೆ ಒಂದು ಬಾಕ್ಸ್ನಂತೆ ಒಟ್ಟು 1 ಸಾವಿರ ಬಾಕ್ಸ್ಗಳಿಗೆ ಶೇ.12 ರಷ್ಟು ಜಿಎಸ್ಟಿ ಸೇರಿ 1,90,400 ರೂ. ಪಾವತಿಸಲು ಬ್ಯಾಂಕ್ ಆಫ್ ಇಂಡಿಯಾದ ಅಹಮದಾಬಾದ್ ಶಾಖೆಯ ಖಾತೆ ಸಂಖ್ಯೆ ಒಂದಕ್ಕೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾನೆ.
ಇದೀಗ ಗ್ಲೌಸ್ ಬಾಕ್ಸ್ಗಳನ್ನು ಪೂರೈಸದೇ ವಂಚಿಸಿದ್ದಾನೆ. ಈ ಬಗ್ಗೆ ಶಿರಗುಪ್ಪಿ ಅವರು ಹುಬ್ಬಳ್ಳಿ- ಧಾರವಾಡ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ