ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ನೇಕಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ದಾವಣಗೆರೆಯಲ್ಲಿ ನೇಕಾರ ಸಮಾಜ ಒಕ್ಕೂಟ ಆಗ್ರಹಿಸಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೇಕಾರ ಸಮಾಜ ಒಕ್ಕೂಟದ ಅಧ್ಯಕ್ಷ ಬಸವರಾಜ್ ಗುಬ್ಬಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರವು ರಾಜ್ಯದಲ್ಲಿ ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ ಸಹಕಾರ ಸಂಘದಲ್ಲಿ 58 ಕೋಟಿ ರೂ. ನಷ್ಟು ಸಾಲ ಇದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಸಾಲ ಇದ್ದು, ಇದನ್ನೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಕೈಮಗ್ಗಾ ಅಭಿವೃದ್ಧಿ ನಿಗಮ ಹಾಗೂ ಪವರ್ ಲೂಮ್ ಕಾರ್ಪೋರೇಷನ್ಗಳೆರಡೂ ನಷ್ಟದಲ್ಲಿವೆ. ಎಂ.ಡಿ. ಲಕ್ಷ್ಮೀನಾರಾಯಣ್ ಅವರು ಕೈಮಗ್ಗಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಲಾಭದಲ್ಲಿ ನಿಗಮಗಳನ್ನು ಮುನ್ನಡೆಸಿದ್ದರು. ಆದ್ರೆ ಈಗ ನಷ್ಟದಲ್ಲಿವೆ. ಈ ಎರಡು ನಿಗಮಗಳಿಗೂ ನೇಕಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.