ದಾವಣಗೆರೆ: ಹೊನ್ನಾಳಿಯ ಹಾಲಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಶಾಂತನಗೌಡರ ನಡುವೆ ಮತ್ತೆ ವಾಕ್ಸಮರ ಮುಂದುವರೆದಿದೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಶಾಂತನಗೌಡರು, ರೇಣುಕಾಚಾರ್ಯ ಯಾರ್ ಜೊತೆ ಎಲ್ಲೆಲ್ಲಿ ಯಾವಾಗ್ಯಾವ ಮಲ್ಗಿದ್ರು ಅಂತ ಗೊತ್ತಿಲ್ಲ, ಆದ್ರೆ ಬಾಗಿಲು ಮಾತ್ರ ತೆರೆದಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ಲೋಕಕಲ್ಯಾಣಕ್ಕಾಗಿ ಶಾಸಕ ರೇಣುಕಚಾರ್ಯ ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ ಹಮ್ಮಿಕೊಂಡಿದ್ದ ಹಿನ್ನೆಲೆ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಶಾಂತನಗೌಡರು ಒತ್ತಡ ಹಾಕಿದ್ದರು. ಇದಕ್ಕೆ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿ ಮಾಜಿ ಶಾಸಕರಿಗೆ ತಾಖತ್ ಇದ್ರೆ ಕೋವಿಡ್ ಕೇರ್ ಸೆಂಟರ್ನಲ್ಲಿ ಬಂದು ಮಲಗಿ ಎಂದು ಚಾಲೆಂಜ್ ಮಾಡಿದ್ದರು.
ಇದರಿಂದ ಕೆರಳಿದ ಮಾಜಿ ಶಾಸಕ ಶಾಂತನಗೌಡರು, ನನಗೆ ಅವ್ರ ಸ್ಟೈಲ್ನಲ್ಲಿ ಚಾಲೆಂಜ್ ಮಾಡ್ತಾರೆ, ಅವ್ರು ಯಾರ್ ಜೊತೆ ಎಲ್ಲೆಲ್ಲಿ ಯಾವಾಗ್ಯಾವ ಮಲ್ಗಿದ್ರು ಅಂತ ಗೊತ್ತಿಲ್ಲ, ಆದ್ರೆ ಅವರ ಬಾಗಿಲು ಮಾತ್ರ ತೆರೆದೇ ಇದೆ ಎಂದು ವ್ಯಂಗ್ಯವಾಡಿದ್ದಾರೆ.