ದಾವಣಗೆರೆ: ಚನ್ನಗಿರಿ ಕ್ಷೇತ್ರದ ಪರಾಜಿತ ಜೆಡಿಎಸ್ ಆಭ್ಯರ್ಥಿ ಹೊದಿಗೆರೆ ರಮೇಶ್ ಜೆಡಿಎಸ್‌ಗೆ ಆಘಾತ ನೀಡಿದ್ದಾರೆ.
ಜೆಡಿಎಸ್ ಎಸ್.ಟಿ ವಿಭಾಗದ ರಾಜ್ಯಾಧ್ಯಕ್ಷರಾಗಿರುವ ಇವರು ರಾಮನಗರದಲ್ಲಿಂದು ಪುನರಾರಂಭಗೊಳ್ಳಲಿರುವ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. 2018ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಇದೀಗ ಜೆಡಿಎಸ್ ಪ್ರಬಲ ಕ್ಷೇತ್ರವಾಗಿರುವ ರಾಮನಗರದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ.
![hodigere ramesh from jds will join congress](https://etvbharatimages.akamaized.net/etvbharat/prod-images/14582153_thum.jpg)
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾ.12ರಿಂದ ಸ್ಪರ್ಧಾತ್ಮಕ ಪರೀಕ್ಷೆ: ನಾಳೆಯಿಂದ ಪ್ರವೇಶ ಪತ್ರ ಲಭ್ಯ
ಚನ್ನಗಿರಿ ಕ್ಷೇತ್ರದ ರಮೇಶ್ ಹಿಂಬಾಲಕರು ಹಾಗು ಕೆಲ ಕಾರ್ಯಕರ್ತರು ಕೂಡ ಕಾಂಗ್ರೆಸ್ ಸೇರಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಪಕ್ಷಾಂತರ ಪರ್ವ ಆರಂಭವಾಗಿದೆ.