ETV Bharat / city

ಪ್ರಜಾಕೀಯ ಪಕ್ಷದ ಅಭಿಮಾನ: ಮಗನಿಗೆ ಕೀರ್ತನ್ ಪ್ರಜಾಕೀಯ ಎಂದು ಹೆಸರಿಟ್ಟ ತಂದೆ - ತನ್ನ ಮಗನಿಗೆ ಕೀರ್ತನ್ ಪ್ರಜಾಕೀಯ ಎಂದು ಹೆಸರಿಟ್ಟ ತಂದೆ

ವಿದ್ಯಾನಾಯ್ಕ ಒಂದು ವರ್ಷದ ಹಿಂದೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಡಲಗೆರೆ ಗ್ರಾಮದ ಪ್ರಿಯಾಂಕ ಎಂಬವರನ್ನು ವಿವಾಹವಾಗಿದ್ದರು. ಇದೀಗ ಇವರಿಗೆ ಮಗು ಜನಿಸಿದ್ದು ಕೀರ್ತನ್ ಪ್ರಜಾಕೀಯ ಎಂದು ಹೆಸರಿಟ್ಟು ಪಕ್ಷದ ಮೇಲೆ ಅಭಿಮಾನ ಮೆರೆದಿದ್ದಾರೆ.

The father to whom the son was named Kirtan Prajakya
ಕೀರ್ತನ್ ಪ್ರಜಾಕೀಯನ ತಂದೆ ವಿದ್ಯಾನಾಯ್ಕ
author img

By

Published : Mar 7, 2022, 10:52 PM IST

ದಾವಣಗೆರೆ: ನಟ‌ ನಿರ್ದೇಶಕ ಉಪೇಂದ್ರ ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೇ ಪಕ್ಷದ ಸಿದ್ಧಾಂತದ ಮೇಲೆ ಸಾಕಷ್ಟು ಜನ ಗ್ರಾ.ಪಂ ಸದಸ್ಯರಾಗಿಯೂ, ಅಧ್ಯಕ್ಷರಾಗಿಯೂ ಆಯ್ಕೆ ಆಗಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿಯ ನಿವಾಸಿ ವಿದ್ಯಾನಾಯ್ಕ ಹಾಗು ಪ್ರಿಯಾಂಕ ದಂಪತಿಗೆ ಗಂಡುಮಗು ಜನಿಸಿದ್ದು, ಮಗುವಿಗೆ ಕೀರ್ತನ್ ಪ್ರಜಾಕೀಯ ಎಂದು ಹೆಸರಿಟ್ಟಿದ್ದಾರೆ.

ಈಗಾಗಲೇ ಜನನ ಪ್ರಮಾಣ ಪತ್ರದಲ್ಲಿ ಕೀರ್ತನ್ ಪ್ರಜಾಕೀಯ ಎಂದು ಹೆಸರು ನೋಂದಾಯಿಸಲಾಗಿದ್ದು, ಪ್ರಮಾಣ ಪತ್ರ ಕೂಡ ಲಭ್ಯವಾಗಿದೆ. ವಿದ್ಯಾನಾಯ್ಕ್ ಅವರು ಪ್ರಜಾಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧದ ಕರಾಳತೆ ಬಿಚ್ಚಿಟ್ಟ ವಿಜಯಪುರದ ವಿದ್ಯಾರ್ಥಿನಿ ಸುಚಿತ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.