ETV Bharat / city

ಸಾಯೋಣ ಬಾ ಅಂತ ಹೆಂಡತಿಯನ್ನು ಕರೆದ, ಪತ್ನಿ, ಆಕೆಯ ಪ್ರಿಯಕರನ ಕಥೆ ಮುಗಿಸಿದ! - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಶಿವಕುಮಾರ್

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹತ್ಯೆ ಮಾಡಿದ್ದ ಶಿಕ್ಷಕನನ್ನು, ಚನ್ನಗಿರಿ ಹಾಗೂ ಹೊನ್ನಾಳಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ ಎರಡು ದಿನಗಳೊಳಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

double-murder-channagiri-honnalli-police-arrested-the-accused-news
ಸಾಯೋಣ ಬಾ ಅಂತ ಹೆಂಡತಿಯನ್ನು ಕರೆದ, ಪತ್ನಿ, ಆಕೆಯ ಪ್ರಿಯಕರನ ಕಥೆ ಮುಗಿಸಿದ!
author img

By

Published : Nov 1, 2020, 8:46 PM IST

ದಾವಣಗೆರೆ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹತ್ಯೆ ಮಾಡಿದ್ದ ಶಿಕ್ಷಕನನ್ನು, ಚನ್ನಗಿರಿ ಹಾಗೂ ಹೊನ್ನಾಳಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ ಎರಡು ದಿನಗಳೊಳಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಜೋಡಿ ಕೊಲೆ ಪ್ರಕರಣ: ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ ಚನ್ನಗಿರಿ-ಹೊನ್ನಾಳಿ ಪೊಲೀಸರು

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಶಿವಕುಮಾರ್ ಎಂಬಾತನೇ ಬಂಧಿತ ಆರೋಪಿ. ಈತನ ಸಹೋದರ ಶಿವರಾಜ್ ನಾಪತ್ತೆಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಶ್ವೇತಾಳನ್ನು ಆಕೆಯ ಗಂಡ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮಾದೇನಹಳ್ಳಿಯಲ್ಲಿ ವಾಸವಿದ್ದ ಪ್ರದೀಪ್, ಚನ್ನಗಿರಿ ಪೊಲೀಸರಿಗೆ ದೂರು ಕೊಟ್ಟಿದ್ದರು‌. ಅದೇ ರೀತಿಯಲ್ಲಿ ಹೊನ್ನಾಳಿಯ ತುಂಗಾಭದ್ರಾ ನದಿಯಲ್ಲಿ ಸಿಕ್ಕ ವೇದಮೂರ್ತಿ ಸಹೋದರ ಕೂಡ ಹೊನ್ನಾಳಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಅತ್ಯಂತ ಕ್ಲಿಷ್ಟ ಜೋಡಿ‌ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಚನ್ನಗಿರಿ ಹಾಗೂ ಹೊನ್ನಾಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಕಳೆದ 9 ವರ್ಷಗಳ ಹಿಂದೆ ಶ್ವೇತಾ ಎಂಬಾಕೆಯನ್ನು ಹೊಳಲ್ಕೆರೆ ಮೂಲದ ಶಿವಕುಮಾರ್ ಪ್ರೀತಿಸಿ ವಿವಾಹವಾಗಿದ್ದ‌. ಚನ್ನಗಿರಿ ತಾಲೂಕಿನ ಕಾರಿಗನೂರು ಕ್ರಾಸ್ ನಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಶಿವಕುಮಾರ್ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅದೇ ಗ್ರಾಮದ ನಿವಾಸಿ ಆದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ವೇದ ಮೂರ್ತಿಯು, ಶ್ವೇತಾಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಹಲವು ಬಾರಿ ಶಿವಕುಮಾರ್ ಹಾಗೂ ಆತನ ಸಹೋದರ ಶಿವರಾಜ್ ಬುದ್ಧಿವಾದ ಹೇಳಿದ್ದರೂ ಶ್ವೇತಾ ಮಾತ್ರ ಕೇಳದೆ ವೇದ ಮೂರ್ತಿ ಜೊತೆಗಿನ ಸಂಬಂಧ ಮುಂದುವರಿಸಿದ್ದಳು. ಈ ವಿಚಾರವಾಗಿ ಆಗಾಗ್ಗೆ ಗಲಾಟೆಯೂ ನಡೆಯುತಿತ್ತು. ಅನೈತಿಕ ಸಂಬಂಧವೇ ಈ‌ ಜೋಡಿ ಕೊಲೆಗೆ ಕಾರಣ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.‌

ಕಳೆದ ಅಕ್ಟೋಬರ್ 28 ರಂದು ಸಹ ಶಿವಕುಮಾರ್ ಹಾಗೂ ಶ್ವೇತಾಳ ಜೊತೆ ಜಗಳ ನಡೆದಿತ್ತು‌. ಬಳಿಕ ತನ್ನ‌ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು. ಅದೇ ದಿನ ಸಂಜೆ ಶ್ವೇತಾ ಹಾಗೂ ವೇದಮೂರ್ತಿ ಹೊನ್ನಾಳಿಯ ತುಂಗಾಭದ್ರಾ ನದಿ ದಂಡೆಯ ಮೇಲೆ ಇರುವ ವಿಷಯ ಶಿವಕುಮಾರ್ ಗೆ ಗೊತ್ತಾಗಿತ್ತು. ಇದರಿಂದ ಕುಪಿತಗೊಂಡ ಶಿವಕುಮಾರ್ ಹಾಗೂ ಆತನ ಸಹೋದರ ಶಿವರಾಜ್ ಜೊತೆ ಹೋಗಿ ದಂಡೆ ಮೇಲೆ‌ ನಿಂತಿದ್ದ ವೇದಮೂರ್ತಿಯ ಕುತ್ತಿಗೆ ಹಿಸುಕಿ‌ ಕೊಂದು ನದಿಯಲ್ಲಿ ಬಿಸಾಡಿ ಹೋಗಿದ್ದರು.

ಹೆಂಡ್ತಿಗೆ ಸಾಯೋಣ ಬಾ ಅಂದ.. ಆಕೆಯ ಕಥೆ ಮುಗಿಸಿದ:

ಹೊನ್ನಾಳಿಯ ಸಂಬಂಧಿಕರ ಮನೆಯಲ್ಲಿದ್ದ ಶ್ವೇತಾಳನ್ನು ಮತ್ತೆ ಕಾರಿಗನೂರು ಕ್ರಾಸ್ ನ ತನ್ನ ಮನೆಗೆ ಕರೆದುಕೊಂಡು ಆರೋಪಿಗಳು ಬಂದಿದ್ದರು. ಆದರೆ ವೇದಮೂರ್ತಿ ಸಾವಿನ ಸುದ್ದಿ ಶ್ವೇತಾಳಿಗೆ ಹೇಗೋ ತಿಳಿದಿತ್ತು. ಗಲಾಟೆಯಾದ ಬಳಿಕ ಶ್ವೇತಾಳಿಗೆ ಸಾಯೋಣ ಬಾ ಅಂತಾ ಚನ್ನಗಿರಿ ತಾಲೂಕಿನ ಸೂಳೆಕೆರೆ ಸೇರಿದಂತೆ ಬೇರೆ ಬೇರೆ ಕಡೆ ಅಕ್ಟೋಬರ್ 28 ರ ರಾತ್ರಿ ಶಿವಕುಮಾರ್ ಸುತ್ತಾಡಿದ್ದ. ಅಲ್ಲಿ ಯಾವುದೇ ಅಂಗಡಿಗಳು ತೆರೆಯದ ಕಾರಣ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದಿದ್ದಾನೆ. ನಂತರ ರಾಜಗೊಂಡನಹಳ್ಳಿ ಗ್ರಾಮದ ತೋಟಕ್ಕೆ ಹೆಂಡತಿ ಶ್ವೇತಾಳನ್ನು ಕರೆದುಕೊಂಡು ಹೋಗಿ ಕೊಲೆ‌ ಮಾಡಿ ಬಾವಿಯಲ್ಲಿ ಬಿಸಾಡಿದ್ದ. ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ನಾಟಕವಾಡಿದ್ದ. ಆದರೆ ಚನ್ನಗಿರಿ ಹಾಗೂ ಹೊನ್ನಾಳಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಒಟ್ಟಿನಲ್ಲಿ ಅಕ್ರಮ ಸಂಬಂಧ ಹೊಂದಿದ ಕಾರಣಕ್ಕೆ ಶ್ವೇತಾ ಹಾಗೂ ವೇದಮೂರ್ತಿ ಹತ್ಯೆಗೀಡಾದರೆ, ಎಲ್ಲರಿಗೂ ಬುದ್ಧಿ ಹೇಳುತ್ತಿದ್ದ ಶಿಕ್ಷಕ ಶಿವಕುಮಾರ್ ಹಂತಕನಾಗಿ ಜೈಲು ಸೇರಿದ್ದಾನೆ‌. ಆದರೆ ಈತನ ಇಬ್ಬರು ಮಕ್ಕಳು ಮಾತ್ರ ತಬ್ಬಲಿ ಆಗಿದ್ದು ದುರಂತವೇ ಸರಿ‌.

ಇದನ್ನು ಓದಿ: ಶಿಕ್ಷಕ, ಶಿಕ್ಷಕಿಯ ಅನುಮಾನಾಸ್ಪದ ಸಾವು: ಕೊಲೆ ನಡೆದಿರುವ ಶಂಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.