ETV Bharat / city

ರಂಗೇರುತ್ತಿದೆ ಚುನಾವಣೆ: ಪ್ರಚಾರಕ್ಕಿಳಿದ ಮಾಜಿ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್...! - ಉಪಚುನಾವಣೆ

ದಾವಣಗೆರೆ ಮಹಾನಗರ ಪಾಲಿಕೆಯ 28 ಹಾಗೂ 37 ನೇ ವಾರ್ಡ್​ಗಳಿಗೆ ನಡೆಯುತ್ತಿರುವ ಉಪಚುನಾವಣೆ ರಂಗೇರಿದೆ. ಕಾಂಗ್ರೆಸ್ ಮಾಜಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಭರ್ಜರಿ ಪ್ರಚಾಕ್ಕಿಳಿದಿದ್ದಾರೆ.

davanagere
ರಂಗೇರುತ್ತಿದೆ ಚುನಾವಣೆ
author img

By

Published : May 17, 2022, 8:27 PM IST

ದಾವಣಗೆರೆ: ಮಹಾನಗರ ಪಾಲಿಕೆಯ 28 ಹಾಗೂ 37 ನೇ ವಾರ್ಡ್​ಗಳಿಗೆ ನಡೆಯುತ್ತಿರುವ ಉಪಚುನಾವಣೆ ರಂಗೇರಿದೆ. ಕೈ ಕಮಲದ ನಡುವೆ ಭರ್ಜರಿ ಪೈಪೋಟಿಗೆ ಕಾರಣವಾಗಿದೆ. ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಇಬ್ಬರು ಪಾಲಿಕೆ ಸದಸ್ಯರಿಂದ ತೆರವಾದ ಎರಡು ವಾರ್ಡ್​ಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇದೇ ಶುಕ್ರವಾರ ಮತದಾನ ನಡೆಯಲಿದೆ.

ಇದರಿಂದ ಕಾಂಗ್ರೆಸ್ ಮಾಜಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಪತ್ನಿ ಪ್ರಭ ಮಲ್ಲಿಕಾರ್ಜುನ್ ಭರ್ಜರಿ ಪ್ರಚಾಕ್ಕಿಳಿದಿದ್ದಾರೆ. ಈ ಎರಡು ವಾರ್ಡ್​ಗಳು ಪ್ರತಿಷ್ಠೆಯ ಕಣವಾಗಿದ್ದರಿಂದ ಬಿಜೆಪಿ ನಾಯಕರೂ ಕೂಡ ಸುಮ್ಮನೆ‌ ಕುಳಿತುಕೊಳ್ಳದೇ ಚುನಾವಣೆ ನಡೆಸಲು ಸಿದ್ಧರಾಗಿದ್ದಾರೆ. ಸಂಸದ ಜಿಎಂ ಸಿದ್ದೇಶ್ವರ್ ಹಾಗೂ ಮಾಜಿ ಸಚಿವ ಎಸ್ಎ ರವೀಂದ್ರನಾಥ್ ಕೂಡ ಪ್ರಚಾರಕ್ಕಿಳಿದು ಮತಯಾಚಿಸುತ್ತಿದ್ದಾರೆ.

ಪ್ರಚಾರಕ್ಕಿಳಿದ ಮಾಜಿ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್

ಇಂದು ಪ್ರಭಾ ಮಲ್ಲಿಕಾರ್ಜುನ್​ರಿಂದ ಭರ್ಜರಿ ಪ್ರಚಾರ: ಮಾಜಿ‌ ಸಚಿವ ಮಲ್ಲಿಕಾರ್ಜುನ್​ರವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್​ ಅವರು ಕೂಡ ಪ್ರಚಾರಕ್ಕೆ ಇಳಿದಿದ್ದು, 37 ನೇ ವಾರ್ಡ್​ನ ಕಾಂಗ್ರೆಸ್ ಅಭ್ಯರ್ಥಿ ರೇಖಾ ರಾಣಿ ಅವರ ಪರ ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ ಮಾಡಿ ಮತ ಯಾಚಿಸಿದರು. ಕೆಟಿಜೆ ನಗರದ 17ನೇ ಕ್ರಾಸಿನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಿಂದ ಆರಂಭವಾಗಿ ಮನೆ ಮನೆಗೆ ತೆರಳಲಿ ಮತ ಯಾಚಿಸಿದರು.

ಇದನ್ನೂ ಓದಿ: ತಂದೆ ಮದ್ಯಪಾನ ವ್ಯಸನಿ; 'ಅಧ್ಯಯನಕ್ಕಾಗಿ ಸಹಾಯ ಮಾಡಿ'.. ಸಿಎಂ ಎದುರು ವಿದ್ಯಾರ್ಥಿಯ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.