ದಾವಣಗೆರೆ : ಸರ್ಕಾರ ಬಡವರಿಗೆ ಹೊರೆಯಾಗಬಾರದೆಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅಧಿಕಾರಿಗಳ ಅಂದಾ- ದರ್ಬಾರ್ನಿಂದಾಗಿ ಆ ಯೋಜನೆಗಳೆ ಬಡವರಿಗೆ ಮಾರಕವಾಗುತ್ತಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ ಭಾಗದ ರೈತರಿಗೆ ಜನರಿಗೆ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳು ಕಂಠಕವಾಗಿವೆ.
ದಾವಣಗೆರೆ ಜಿಲ್ಲೆಯ ಹರಿಹರ ಚನ್ನಗಿರಿ ತಾಲೂಕುಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ರೈತರಿಗೆ ಹಾಗೂ ಬಡವರ್ಗದ ಜನರಿಗೆ ಕಂಠಕವಾಗಿ ಪರಿಣಮಿಸಿವೆ. ಇದರಿಂದ ಸರ್ಕಾರದ ವಿರುದ್ಧ ಜನ ಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ. ಏಕಾಏಕಿ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬಂದಿರುವುದ್ದರಿಂದ ಬಡವರ್ಗದ ಜನರು ವಾಸಿಸುತ್ತಿರುವ ಮನೆಯ ವಿದ್ಯುತ್ ಸಂಪರ್ಕವನ್ನು ಕೆಇಬಿ ಅಧಿಕಾರಿಗಳು ಕಡಿತ ಮಾಡಿರುವ ಘಟನೆ ಕೂಡ ನಡಿದಿದೆ.
ಇದರಿಂದ ಬಡವರು ಬಂದಿರುವ ಸಾವಿರಗಟ್ಟಲೇ ಕರೆಂಟ್ ಬಿಲ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಬಡವರಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಯಾಗಿದೆ. ಆದರೆ, ಈಗ ಆ ಮನೆಗಳಿಗೆ ಈಗ ಐವತ್ತು ಅರವವತ್ತು ಸಾವಿರ ಬಿಲ್ ಬಂದಿದ್ದು, ಬಡವರ ನೆಮ್ಮದಿ ಹಾಳು ಮಾಡಿದೆ. ಬಿಲ್ ಕಟ್ಟಬೇಕು ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ವಾರ್ನಿಂಗ್ ನೀಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಕೂಡ ಇದೇ ಪರಿಸ್ಥಿತಿ ಇದ್ದು, ಸಾವಿರಾರು ರೂಪಾಯಿ ಬಿಲ್ ನೀಡಿದ್ದಾರೆ. ಕಟ್ಟದೇ ಇರುವ ಕುಟುಂಬಗಳ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಬಡವರಿಗೆ ಸರ್ಕಾರ ಭಾಗ್ಯ ಜ್ಯೋತಿ ಯೋಜನೆ ಅಡಿ 40 ಯೂನಿಟ್ ಫ್ರೀ ವಿದ್ಯುತ್ ನೀಡುತ್ತಿದೆ. ಈಗ 70 ಯೂನಿಟ್ ಗಿಂತ ಜಾಸ್ತಿ ನೀಡಲು ನಿರ್ಧಾರ ಮಾಡಿದೆ. ಆದರೆ ಈಗ ಬಡವರ ಮನೆಗೆ ಸಾವಿರಾರು ರೂಪಾಯಿ ಬಿಲ್ ಬಂದಿದ್ದು, ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ.
ಇದು ಬೆಸ್ಕಾಂನ ಫೀಡರ್ಗಳಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ ಪ್ರಕರಣವನ್ನು ಮುಚ್ಚಿಹಾಕಲು ಈ ರೀತಿಯಾಗಿ ಬಡವರ ಮೇಲೆ ಬಿಲ್ ಹೆಚ್ಚಾಳ ಮಾಡಿ ಅ ಹಣವನ್ನು ಇಲ್ಲಿ ತೋರಿಸುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಬಡವರಿಗೆ ನೀಡಿದ್ದ ಯೋಜನೆಯಿಂದ ನೂರಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದು, ಬಿಲ್ ಕಟ್ಟದ ಹಿನ್ನೆಲೆ ಕತ್ತಲೆಯಲ್ಲಿ ಜೀವನ ಮಾಡುವಂತಾಗಿದೆ. ಇಂಧನ ಸಚಿವರ ಇತ್ತಗಮನಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.
ಇದನ್ನೂ ಓದಿ : ಬಾಯಲ್ಲಿ ಮೇಕ್ ಇನ್ ಇಂಡಿಯಾ, ಚೀನಾದಿಂದ ಧ್ವಜ ತರಿಸುವುದು ನಾಚಿಕೆಗೇಡಿನ ಸಂಗತಿ: ಉಮಾಶ್ರೀ