ETV Bharat / city

ಬೊಮ್ಮಾಯಿ ಒಬ್ಬ ಕೋಮುವಾದಿ ಮುಖ್ಯಮಂತ್ರಿ: ನಟ ಚೇತನ್ ಅಹಿಂಸಾ - ಮತಾಂತರ ನಿಷೇಧ ಕಾಯ್ದೆ ಬಗ್ಗೆ ನಟ ಚೇತನ್ ಪ್ರತಿಕ್ರಿಯೆ

ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದ್ರೆ ಕ್ರಮ ಕೈಗೊಳ್ಳಲಿ. ಆದರೆ ಜನರಿಗೆ ಹೆದರಿಸಿ ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ. ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ, ಅವರ ತಂದೆ ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದರು ಎಂದು ನಟ ಚೇತನ್ ಹೇಳಿದರು.

r Chetan Ahimsa
ಚೇತನ್ ಅಹಿಂಸಾ
author img

By

Published : Dec 25, 2021, 1:53 PM IST

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಾತ್ಯಾತೀತ ಸಿಎಂ‌ ಅಂದುಕೊಂಡಿದ್ವಿ. ಆದರೆ ಅವರೊಬ್ಬ ಕೋಮುವಾದಿ ಮುಖ್ಯಮಂತ್ರಿ ಎಂದು ನಟ ಚೇತನ್ ಅಹಿಂಸಾ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಚೇತನ್ ಜನರನ್ನು ಹೆದರಿಸಲು ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ. ಅಂಬೇಡ್ಕರ್, ಬಸವಣ್ಣನವರು ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ವಿರೋಧಿ ನೀತಿಯಾಗಿದೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ ಎಂದರು.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ನಟ ಚೇತನ್ ಅಹಿಂಸಾ

ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದ್ರೆ ಕ್ರಮ ಕೈಗೊಳ್ಳಲಿ. ಆದರೆ ಜನರಿಗೆ ಹೆದರಿಸಿ ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ, ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಿ ಕಾಯ್ದೆ ತಂದಿದ್ದಾರೆ ಎಂದು ಆರೋಪಿಸಿದರು. ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ, ಅವರ ತಂದೆ ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದರು ಎಂದು ಚೇತನ್ ಹೇಳಿದರು.

ಮೊಟ್ಟೆಯನ್ನು ವಿರೋಧಿಸುವ ಸ್ವಾಮೀಜಿಗಳ ವಿರುದ್ಧ ಕಿಡಿ..

ಮೊಟ್ಟೆಯನ್ನು ವಿರೋಧ ಮಾಡುವ ಸ್ವಾಮಿಗಳು ಬಸವಣ್ಣನವರ ತತ್ವದಡಿಯಲ್ಲಿ ಬದುಕುತ್ತಿದ್ದಾರೆಂದು ಹೇಳಲಾಗುವುದಿಲ್ಲ. ಮಕ್ಕಳ ಬಗ್ಗೆ ಕಾಳಜಿ ಇರುವ ಸ್ವಾಮೀಜಿಗಳು, ಸಮಸಮಾಜ ಬಯಸುವ ಸ್ವಾಮೀಜಿಗಳು ಮಾತ್ರ ಬಸವಣ್ಣನವರ ತತ್ವ ದಡಿಯಲ್ಲಿ ಬದುಕುತ್ತಿದ್ದಾರೆ. ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಅದ್ದರಿಂದ ಒಂದಲ್ಲ ಎರಡು ಮೊಟ್ಟೆಗಳನ್ನು ಮಕ್ಕಳಿಗೆ ನೀಡ್ಬೇಕು, ತಿನ್ನುವವರಿಗೆ ಮೊಟ್ಟೆ ನೀಡಿ, ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು ಹಣ್ಣು ನೀಡಿ ಎಂದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ, ಮದುವೆ ವಯಸ್ಸು ಏರಿಕೆ ಗೊಂದಲಕಾರಿ: ಮಾಜಿ ಸಚಿವ ಯು.ಟಿ. ಖಾದರ್

ಕೆಲ ಸ್ವಾಮೀಜಿಗಳು ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ. ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಛಿದ್ರ ಛಿದ್ರ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇವಾಗಿದೆ. ಇದನ್ನೇ ಬಸವಣ್ಣನವರು ಸ್ವಾಮೀಜಿಗಳಿಗೆ ಹೇಳಿಕೊಟ್ಟಿದ್ದಾ? ಇದು ಬಸವ ತತ್ವ ಅಲ್ಲ, ಸ್ವಾಮೀಜಿಗಳ ಸ್ವಾರ್ಥದ ಆಲೋಚನೆ ಇದು ಎಂದು ವಾಗ್ದಾಳಿ ನಡೆಸಿದರು.

ಶಕ್ತಿ ಪ್ರದರ್ಶನದಿಂದ ಬಂದ್ ಯಶಸ್ವಿ ಆಗಲ್ಲ:

ಕನ್ನಡ ಚಿತ್ರರಂಗದ ಎಲ್ಲರೂ ಬಂದ್​​​ಗೆ ಬೆಂಬಲ ಕೊಡ್ತಾರೆ ಅಂತ ಹೇಳಲಾಗುವುದಿಲ್ಲ. ಕೆಲವರು ಬೆಂಬಲ ಕೊಡಬಹುದು, ಕೆಲವರು ಕೊಡದೇ ಇರಬಹುದು. ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕು, ಶಕ್ತಿ ಪ್ರದರ್ಶನದಿಂದ ಬಂದ್ ಯಶಸ್ವಿ ಆಗೋದಿಲ್ಲ. ಎಲ್ಲಾ ಸಂಘಟನೆಗಳು ಯೋಚನೆ ಮಾಡಿ, ಒಳ್ಳೆಯದು ಆಗುತ್ತೆ ಎಂದರೆ ಬಂದ್ ಮಾಡಲಿ ಎಂದು ಚೇತನ್​ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.