ಯಲಹಂಕ(ಬೆಂಗಳೂರು) : ನಿರುಪಯುಕ್ತ ವಾಹನಗಳ ಬಿಡಿಭಾಗಗಳಿಂದ ತಯಾರಾದ ವಿವಿಧ ಕಲಾಕೃತಿಗಳು ಯಲಹಂಕದ ಜನರನ್ನು ಕೈಬೀಸಿ ಕರೆಯುತ್ತಿವೆ. ಹಗಲಿನಲ್ಲಿ ಲೋಹದ ಕಲಾಕೃತಿಗಳಂತೆ ಕಾಣುವ ಕುದುರೆ, ಗ್ಲೋಬ್, ಆಟೋ, ಫಿಯಟ್ ಕಾರುಗಳು ರಾತ್ರಿ ವೇಳೆ ದೀಪಾಲಂಕಾರದಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿವೆ.
ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು. ಫುಟ್ಪಾತ್ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಕಲಾಕೃತಿಗಳನ್ನು ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಉದ್ಘಾಟನೆ ಮಾಡಿದರು. ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 3 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.
ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಕಲಾಕೃತಿಗಳನ್ನು ಮಾಡಲಾಗಿದೆ. ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್ಇಎಸ್ ಸರ್ಕಲ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಡೈರಿ ವೃತ್ತ ಫುಟ್ಪಾತ್ನಲ್ಲಿ ಈ ವಿವಿಧ ಕಲಾಕೃತಿಗಳು ಕಂಗೊಳಿಸುತ್ತಿವೆ.
ಇದನ್ನೂ ಓದಿ: ಸಚಿವ ನಾರಾಯಣಗೌಡ ಸೂಚನೆ : ರೇಷ್ಮೆ ಬೆಳೆಗಾರನ ಮೇಲೆ ದೌರ್ಜನ್ಯ ಎಸಗಿದ ರೀಲರ್ ವಿರುದ್ಧ ಎಫ್‌ಐಆರ್
ಅಭಿವೃದ್ಧಿ ಹೊಂದುತ್ತಿರುವ ಯಲಹಂಕ ನಗರವನ್ನು ಮತ್ತಷ್ಟು ವರ್ಣರಂಜಿತವಾಗಿಸಲು ಹೆಚ್ಚಿನ ಕ್ರಮಕೈಗೊಳ್ಳಲು ಸರ್ಕಾರ ಬದ್ಧ ಎಂದು ಎಸ್.ಆರ್. ವಿಶ್ವನಾಥ್ ತಿಳಿಸಿದರು.