ETV Bharat / city

ಜಗತ್ತು ಇಂದು ನಮ್ಮನ್ನು ನೋಡುವ ರೀತಿ ಬದಲಾಗಿದೆ ಎಂದ ವಿದೇಶಾಂಗ ಸಚಿವ ಜೈಶಂಕರ್ - Etv bharat

ವಿದೇಶಾಂಗ ನೀತಿಯು ಹೆಚ್ಚು ಕೇಂದ್ರೀಕೃತವಾಗಿದೆ ಮತ್ತು ಜನರ ಹಿತದೃಷ್ಟಿಯಿಂದ ಕೊಡುಗೆ ನೀಡುತ್ತಿದೆ. ಜಗತ್ತು ಈಗ ನಮ್ಮನ್ನು ನೋಡುವ ರೀತಿ ಬದಲಾಗಿದೆ, ನಮ್ಮ ದೇಶ ಈಗ ಪ್ರಪಂಚದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್
author img

By

Published : Aug 13, 2022, 10:58 AM IST

ಬೆಂಗಳೂರು: ಯುವ ಪೀಳಿಗೆಗೆ ತಮ್ಮ ಡೊಮೇನ್ ಜ್ಞಾನದ ಜೊತೆಗೆ ಪ್ರಪಂಚದಾದ್ಯಂತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಮತ್ತು ಅವಶ್ಯಕತೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅಭಿಪ್ರಾಯಪಟ್ಟರು. ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಇನ್​ಕ್ಯುಬೇಷನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ವಿನೂತನ ಆಲೋಚನೆಗಳೊಂದಿಗೆ ಒಗ್ಗೂಡಿರುವುದು ತುಂಬಾ ಸಂತೋಷವಾಗಿದೆ ಎನ್ನುತ್ತಾ ಕೇಂದ್ರದ ಸಾಧನೆಗಳತ್ತ ಬೆಳಕು ಚೆಲ್ಲಿದರು.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಶ್ಲಾಘಿಸಿದ ಜೈಶಂಕರ್, ಮೋದಿ ನಾಯಕತ್ವದ ಪರಿಣಾಮವನ್ನು ದೇಶದಲ್ಲಿ ಆಗುತ್ತಿರುವ ಬದಲಾವಣೆಗಳಲ್ಲಿ ಕಾಣಬಹುದು. ಜನರ ಕೆಲವು ಮೂಲ ನಿರೀಕ್ಷೆಗಳು ಬದಲಾಗಿವೆ. ಇಂದು ದೇಶವಾಸಿಗಳ ಸ್ವಂತ ಮನೆಯು ದೂರದ ಕನಸಾಗಿಲ್ಲ ಅದು ನಿಜವಾಗಿದೆ ಎಂದು ಅವರು ಹೇಳಿದರು.

ನಮ್ಮ ಸಾಮರ್ಥ್ಯ ಜಗತ್ತಿಗೆ ತೋರಿಸಿದ್ದೇವೆ: ಕೋವಿಡ್ ಸಂಕಷ್ಟದ ಸಮಯದಲ್ಲಿ ಜಗತ್ತು ತಲ್ಲಣಗೊಂಡಾಗ ಭಾರತದಲ್ಲಿ 2 ಬಿಲಿಯನ್ ಜನರಿಗೆ ಯಶಸ್ವಿಯಾಗಿ ಲಸಿಕೆ ಹಾಕಲು ಸಾಧ್ಯವಾಯಿತು ಮತ್ತು ಲಸಿಕೆ ಹಾಕಿದವರಿಗೆ ಡಿಜಿಟಲ್ ಪ್ರಮಾಣಪತ್ರಗಳನ್ನು ಪರಿಚಯಿಸಿದ ವಿಶ್ವದ ಮೊದಲ ದೇಶವಾಗಿದೆ. ನಮ್ಮ ಲಸಿಕೆ ಕಾರ್ಯಕ್ರಮವು ವಿಶ್ವದ ಲಸಿಕೆ ಪ್ರಕ್ರಿಯೆಗೆ ಸಮನಾಗಿದೆ ಮತ್ತು ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಗುರಿ ಸಾಧಿಸಿದೆ ಎಂದರು.

ಇಡೀ ಜಗತ್ತು ಆಧುನಿಕ ಭಾರತವನ್ನು ವೀಕ್ಷಿಸುತ್ತಿದೆ. ಯಾವುದೇ ವಿದೇಶಾಂಗ ನೀತಿಯು ಕಷ್ಟದ ಸಮಯದಲ್ಲಿ ದೇಶವನ್ನು ಭದ್ರಪಡಿಸುವುದು ಮತ್ತು ಸೂಕ್ಷ್ಮ ಅವಧಿಗಳಲ್ಲಿ ಇತರ ದೇಶಗಳೊಂದಿಗೆ ಸಂಬಂಧವನ್ನು ಉತ್ತಮವಾಗಿಸುವುದು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ಭಾರತೀಯ ವಿದೇಶಾಂಗ ನೀತಿಯು ಹೆಚ್ಚು ಕೇಂದ್ರೀಕೃತವಾಗಿದೆ ಮತ್ತು ಜನರ ಹಿತದೃಷ್ಟಿಯಿಂದ ಕೊಡುಗೆ ನೀಡುತ್ತಿದೆ.

ಜಗತ್ತು ಈಗ ನಮ್ಮನ್ನು ನೋಡುವ ರೀತಿ ಬದಲಾಗಿದೆ, ನಮ್ಮ ದೇಶ ಈಗ ಪ್ರಪಂಚದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ದೀರ್ಘಾವಧಿಯಲ್ಲಿ ಭಾರತೀಯರ ಒಳಿತಿಗಾಗಿ ಜಗತ್ತು ಭಾರತಕ್ಕಾಗಿ ತೆರೆದುಕೊಳ್ಳಬೇಕೆಂದು ನರೇಂದ್ರ ಮೋದಿಯವರು ಬಯಸುತ್ತಾರೆ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ: ನಂತರ ಜೈಶಂಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಶ್ವ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಆರ್ಥಿಕ ಹಿಂಜರಿತದಿಂದ ಉದ್ಯೋಗಾವಕಾಶಗಳ ಮೇಲಾಗುವ ಪರಿಣಾಮಗಳಿಂದ ಹಿಡಿದು ಪ್ರಸ್ತುತ ಚೀನಾ - ತೈವಾನ್ ಸಂಘರ್ಷದ ಪರಿಣಾಮದವರೆಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ಡಾ.ಎಂ.ಆರ್.ದೊರೆಸ್ವಾಮಿ, ಡಾ. ಜೈಶಂಕರ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದರು. ತನ್ನ ನೀತಿಗಳಿಂದಾಗಿ ಭಾರತವು ಇಂದು ವಿಶ್ವ ಭೂಪಟದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

(ಇದನ್ನೂ ಓದಿ: ಬೆಂಗಳೂರು ಸ್ಟ್ರೀಟ್ ಫುಡ್​ಗೆ ಮನಸೋತ ವಿದೇಶಾಂಗ ಸಚಿವ ಎಸ್‌.ಜೈಶಂಕರ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.