ETV Bharat / city

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರಿಗೆ ನಿಗಮಗಳ ವಿಲೀನ? ಸರ್ಕಾರಕ್ಕೆ ಅನಂತ್ ಸುಬ್ಬರಾವ್ ಸಲಹೆ ಹೀಗಿದೆ.. - covid effects on transport corporations

ಬಿಎಂಟಿಸಿ, ಕೆಎಸ್ಆರ್​ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸೇರಿ ಇನ್ಮುಂದೆ ಒಂದೇ ನಿಗಮವಾಗಿ ಮಾಡಿ ಎಂಬ ಸಲಹೆಗಳನ್ನು ನೀಡಲಾಗುತ್ತಿದೆ‌.‌ 4 ನಿಗಮಗಳನ್ನು ವಿಲೀನ ಮಾಡಿ ಒಂದೇ‌ ನಿಗಮ ರಚಿಸುವಂತೆ ಟ್ರಾನ್ಸ್​ಪೋರ್ಟ್ ಫೆಡರೇಶನ್​​ಗಳು ಸಲಹೆ ನೀಡಿವೆ.

will transport corporations merge to come out from economic crisis ?
ಕೆಎಸ್ಆರ್​ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್​​ನ ಅಧ್ಯಕ್ಷ ಅನಂತ್ ಸುಬ್ಬರಾವ್
author img

By

Published : Jan 30, 2022, 6:17 PM IST

ಬೆಂಗಳೂರು: ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿದೆ‌. ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರಿಗೆ ನಿಗಮಗಳು ಶೀಘ್ರದಲ್ಲೇ ವಿಲೀನವಾಗುತ್ತಾ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಬಿಎಂಟಿಸಿ, ಕೆಎಸ್ಆರ್​ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸೇರಿ ಇನ್ಮುಂದೆ ಒಂದೇ ನಿಗಮವಾಗಿ ಮಾಡಿ ಎಂಬ ಸಲಹೆಗಳನ್ನು ನೀಡಲಾಗುತ್ತಿದೆ‌.‌ 4 ನಿಗಮಗಳನ್ನು ವಿಲೀನ ಮಾಡಿ ಒಂದೇ‌ ನಿಗಮ ರಚಿಸುವಂತೆ ಟ್ರಾನ್ಸ್​ಪೋರ್ಟ್ ಫೆಡರೇಶನ್​​ಗಳು ಸಲಹೆ ನೀಡಿವೆ.

ಕೆಎಸ್ಆರ್​ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್​​ನ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾಹಿತಿ ನೀಡಿರುವುದು

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಾರಿಗೆ ನಿಗಮಗಳ‌ ಪುನರ್​ರಚನಾ ಸಮಿತಿಗೆ ಸಾರಿಗೆ ನೌಕರರ ಸಂಘದಿಂದ ಶಿಫಾರಸು ಮಾಡಲಾಗಿದೆ. ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಬಸ್​ಗಳ‌ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೇ ನಿಗಮಗಳು ಪರದಾಟ ಅನುಭವಿಸುತ್ತಿವೆ. ‌1997 ರಿಂದ ಈವರೆಗೂ ನಾಲ್ಕೂ ನಿಗಮಗಳು ಬರೋಬ್ಬರಿ 4,500 ಕೋಟಿ ರೂ. ನಷ್ಟ ಅನುಭವಿಸಿವೆ. ಪಿಎಫ್, ಎಲ್​ಐಸಿ, ನಿವೃತ್ತಿ ವೇತನ ಸೇರಿ 1,700 ಕೋಟಿ ರೂ. ಬಾಕಿ ಇದೆ. ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ ಆಡಳಿತ ವಿಭಾಗ ಸೇರಿದಂತೆ ಹಲವು ನಷ್ಟ ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಲಾಗಿದೆ.‌ ಈ ಕುರಿತು ಕೆಎಸ್ಆರ್​ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್​​ನ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ: ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಜಿಪಂ/ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ

1961ರಲ್ಲಿ ಆರಂಭವಾಗಿದ್ದ ಕೆಎಸ್ಆರ್​ಟಿಸಿ 1997 ರಲ್ಲಿ ನಾಲ್ಕು‌ ನಿಗಮಗಳಾಗಿ ವಿಂಗಡಣೆಯಾಗಿತ್ತು. 1997 ರಲ್ಲೂ ಪ್ರತ್ಯೇಕ ನಿಗಮ ಬೇಡ ಅಂತ ಫೆಡರೇಶನ್ ಹೇಳಿತ್ತು. ಸದ್ಯ ಆರ್ಥಿಕ ಪರಿಸ್ಥಿತಿಯಿಂದ ದಿವಾಳಿಯಾಗಿರುವ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಿ ನೌಕರರ ಹಾಗೂ ಸಾರಿಗೆ ನಿಗಮಗಳ ಅಭಿವೃದ್ಧಿ ಪಡಿಸಬೇಕೆಂದು ಸಲಹೆ ನೀಡಲಾಗಿದೆ. ಸುಮಾರು 24 ಪುಟಗಳನ್ನೊಳಗೊಂಡ ಡಾಕ್ಯುಮೆಂಟ್ ಅನ್ನು ನೀಡಲಾಗಿದೆ. ನಾಲ್ಕು ನಿಗಮಗಳನ್ನು ಸೇರಿಸಿ ಒಂದು ನಿಗಮವಾಗಿ ಮಾಡಿದರೆ ವಾರ್ಷಿಕವಾಗಿ 200ಕೋಟಿ ರೂಪಾಯಿ ಉಳಿಯುತ್ತದೆ. ಜೊತೆಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಬೇಗ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಸದ್ಯ ಸಮಿತಿ ಅಧ್ಯಕ್ಷರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅಂತಿಮ ವರದಿ ಸಲ್ಲಿಸುವಾಗ ಯಾವ ರೀತಿಯಲ್ಲಿ ತೀರ್ಮಾನ ಹೊರ ಬರಲಿದೆ ಕಾದು ನೋಡಬೇಕಿದೆ ಎಂದು ತಿಳಿಸಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.