ETV Bharat / city

ಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕಾಗಿ ವೆಬ್ ಪೋರ್ಟಲ್ ಕಾರ್ಯಾರಂಭ - ಉಕ್ರೇನ್​ ಮೇಲೆ ಸಮರ ಸಾರಿದ ರಷ್ಯಾ

ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುವುದು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಕಲೆ ಹಾಕಲಿದೆ..

ರಷ್ಯಾ ಉಕ್ರೇನ್ ಯುದ್ಧ
ರಷ್ಯಾ ಉಕ್ರೇನ್ ಯುದ್ಧ
author img

By

Published : Feb 25, 2022, 12:32 PM IST

ಬೆಂಗಳೂರು : ಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೆಬ್ ಪೋರ್ಟಲ್​​ ಅನ್ನು ಅಭಿವೃದ್ಧಿಪಡಿಸಿದೆ.

ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಜನರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ವೆಬ್ ಪೋರ್ಟಲ್ ಯುಆರ್​ಎಲ್- http://ukraine.karnataka.tech ನೋಡಲ್​ ಅಧಿಕಾರಿ ಮನೋಜ್​ ರಾಜನ್​ ಮತ್ತು ತಂಡ ಕೇವಲ 12 ಗಂಟೆಯೊಳಗೆ ಈ ಪೋರ್ಟಲ್​​ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ವೆಬ್ ಪೋರ್ಟಲ್

ಯಾವ ಮಾಹಿತಿ ನೀವು ನೀಡಬೇಕು ಹಾಗೂ ಏನೆಲ್ಲಾ ಮಾಹಿತಿ ಇರಲಿದೆ?

- ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಂಬಂಧಿಸಿದ ಕೆಲ ದಾಖಲೆಯ ಮಾಹಿತಿಯನ್ನ ನೀವು ನೀಡಬೇಕು. ಅಲ್ಲಿ ಸಿಲುಕಿರುವವರ ಜೊತೆಗಿನ ಸಂಬಂಧ, ಸಿಲುಕಿರುವ ಜನರ ಮಾಹಿತಿ ನೀಡಬೇಕು.

- ಈ ಪೋರ್ಟಲ್​ನಲ್ಲಿ ವಿದೇಶಾಂಗ ಸಚಿವಾಲಯ ವೆಬ್‌ಸೈಟ್ ಮಾಹಿತಿ ಹಾಗೂ ಭಾರತ ಸರ್ಕಾರದಿಂದ ಸಂಗ್ರಹಿಸಿದ ಅಗತ್ಯ ಮಾಹಿತಿ ಇರಲಿದೆ.

- ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಉಕ್ರೇನ್​ನಲ್ಲಿನ ಭಾರತೀಯ ದೂತವಾಸ, ಹೆಲ್ಪ್‌ಲೈನ್ ನಂಬರ್ ಹಾಗೂ ಇ-ಮೇಲ್ ಅಡ್ರೆಸ್ ಇರಲಿದೆ.

- ಸದ್ಯದ ಸುದ್ದಿಗಳು ಕೂಡ ಇರಲಿದೆ

ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುವುದು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಕಲೆ ಹಾಕಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.