ETV Bharat / city

ಜನರ ಮುಂದೆ ಪರಿಷ್ಕೃತ ಪಠ್ಯ ಇಡುತ್ತೇವೆ, ತಪ್ಪಿದ್ದಲ್ಲಿ ತಿದ್ದುತ್ತೇವೆ: ಸಚಿವ ನಾಗೇಶ್

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ವೆಬ್ ಸೈಟ್​​​ನಲ್ಲಿ ಪಠ್ಯ ಪರಿಷ್ಕೃತ ಹಾಗೂ ಹಳೆಯ ಪಠ್ಯದ ವಿವರ ಹಾಕುತ್ತೇವೆ. ಪರಿಷ್ಕರಣೆ ಆಗಿರುವ ಪಠ್ಯಗಳಲ್ಲಿ ಲೋಪ ಇದ್ದರೆ ಸರಿಪಡಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

author img

By

Published : Jun 7, 2022, 12:31 PM IST

Updated : Jun 7, 2022, 12:38 PM IST

Education Minister Nagesh
ಶಿಕ್ಷಣ ಸಚಿವ ನಾಗೇಶ್

ಬೆಂಗಳೂರು: ಪಬ್ಲಿಕ್ ಡೊಮೈನ್​​ನಲ್ಲಿ ಪಠ್ಯ ಪರಿಷ್ಕರಣೆ ವಿವರ ಹಾಕುತ್ತೇವೆ. ಹೊಸ ಪಠ್ಯದಲ್ಲಿ ಅಕಸ್ಮಾತ್ ಲೋಪದೋಷಗಳು ಇದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಆರ್.ಟಿ ನಗರದಲ್ಲಿ ಸಿಎಂ ಬೊಮ್ಮಾಯಿ‌ ಭೇಟಿ ಮಾಡಿದ ಅವರು, ನಿನ್ನೆ(ಸೋಮವಾರ) ನಡೆದ ಆರ್‌ಎಸ್ಎಸ್ ಸಭೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದರು.

ಆರ್‌ಎಸ್ಎಸ್ ಮುಖಂಡರ ನಿರ್ದೇಶನಗಳ ಬಗ್ಗೆ ಸಿಎಂ ಗಮನಕ್ಕೆ ತಂದ ನಾಗೇಶ್ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ, ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ವೆಬ್ ಸೈಟ್​​​ನಲ್ಲಿ ಪಠ್ಯ ಪರಿಷ್ಕೃತ ಹಾಗೂ ಹಳೆಯ ಪಠ್ಯದ ವಿವರ ಹಾಕುತ್ತೇವೆ. ಪರಿಷ್ಕರಣೆ ಆಗಿರುವ ಪಠ್ಯಗಳಲ್ಲಿ ಲೋಪ ಇದ್ದರೆ ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಹಲವು ಪಠ್ಯ ತೆಗೆದಿದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಉತ್ತರ ಕೊಡಬೇಕಿತ್ತು. ಅದರ ವಿಚಾರಕ್ಕೆ ಸಿದ್ದರಾಮಯ್ಯ ಹೋಗಲೇ ಇಲ್ಲ. ನಾಡು ನುಡಿ ಮೇಲೆ ಅಭಿಮಾನ ಹುಟ್ಟುವ ಪಾಠಗಳನ್ನೇ ಬರಗೂರು ತೆಗೆದಿದ್ದರು ಎಂದು ತಿರುಗೇಟು ನೀಡಿದರು.

ನಾವು ಈಗಾಗಲೇ 2 ನಿರ್ಣಯ ತೆಗೆದುಕೊಂಡಿದ್ದೇವೆ. ಸಿದ್ದರಾಮಯ್ಯನವರು ಪರಿಷ್ಕೃತ ಪಠ್ಯದಲ್ಲಿ ಏನು ಬಿಟ್ಟಿದ್ದರು, ಈಗ ನಾವೇನು ಸೇರಿಸಿದ್ದೇವೆ ಎಲ್ಲವನ್ನೂ ಸಾರ್ವಜನಿಕರ ಮುಂದಿಡುತ್ತೇವೆ. ಜನರು ತಪ್ಪಿದೆ ಅಂತಾ ಹೇಳಿದ್ದನ್ನು ಬದಲಾಯಿಸುವ ಮನಸ್ಸಿದೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ತಪ್ಪಿದೆ ಎಂದಿದ್ದನ್ನು ನಾವು ಸರಿಪಡಿಸಿದ್ದೇವೆ ಎಂದರು.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದ: ಆರ್​​ಎಸ್​​ಎಸ್ ಕಚೇರಿಯಲ್ಲಿ ಬಿಜೆಪಿ ನಾಯಕರ ಜೊತೆ ಸುದೀರ್ಘ ಸಮಾಲೋಚನೆ

Last Updated : Jun 7, 2022, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.