ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜಿನಗರದ ಮೆಟ್ರೋ ಸ್ಟೇಷನ್ ಮಾಳಿಗೆ ಸೋರುತ್ತಿದೆ.
ನಿನ್ನೆ ರಾತ್ರಿ ಸುರಿದ ಸಣ್ಣ ಮಳೆಗೆ ಮೆಟ್ರೋ ಸ್ಟೇಷನ್ನಲ್ಲಿ ನೀರು ಸೋರಿಕೆ ಉಂಟಾಗಿದೆ. ಇಷ್ಟು ದಿನ ಸುರಂಗದಲ್ಲಿ ನೀರು ಸೋರಿಕೆ ಆಗುತ್ತಿತ್ತು. ಇದೀಗ ಸ್ಟೇಷನ್ಗೂ ನೀರು ಜಿನುಗುವಿಕೆ ಶುರುವಾಗಿದೆ. ನೀರು ಸೋರಿಕೆಯಿಂದ ಮೆಟ್ರೋ ಸಿಬ್ಬಂದಿ, ಸಾರ್ವಜನಿಕರಿಗಾಗಿ ಸೂಚನಾ ಫಲಕ ಹಾಕಿದ್ದು, ಅಡಚಣೆಗೆ ಕ್ಷಮಿಸಿ ಎಂದು ಕೋರಿದೆ.
ಇನ್ನು, ಮಳೆ ನೀರು ಸೋರಿಕೆ ಹಿನ್ನೆಲೆ ನಿಲ್ದಾಣದ ಒಳಗೆ ಅಲ್ಲಲ್ಲಿ ಬಕೆಟ್ಗಳನ್ನು ಇಡಲಾಗಿದ್ದು, ಗುತ್ತಿಗೆದಾರರ ಕಳಪೆ ಕಾಮಗಾರಿಯೇ ಮೆಟ್ರೋ ಸ್ಟೇಷನ್ ಮಾಳಿಗೆ ಸೋರಿಕೆಗೆ ಕಾರಣ ಎನ್ನಲಾಗುತ್ತಿದೆ.