ETV Bharat / city

ಸ್ವಚ್ಛ ಸರ್ವೇಕ್ಷಣ್​​​ನಲ್ಲಿ ಬೆಂಗಳೂರಿಗೆ ಸಿಗದ 'ಸ್ಟಾರ್' ಗರಿ.. ನಗರದಲ್ಲಿ ಕಸ ನಿರ್ವಹಣೆಯ ತೊಡಕುಗಳೇನು? - bbmp waste management

ಲಾಕ್ ಡೌನ್ ಇದ್ದರೂ ಬಿಬಿಎಂಪಿ ಒಂದು ದಿನವೂ ಕಸ ನಿರ್ವಹಣೆ ಕೆಲಸ ನಿಲ್ಲಿಸಿಲ್ಲ. ಆದರೂ ಕೂಡಾ ಸ್ವಚ್ಛ ಸರ್ವೇಕ್ಷಣ್​​​ನಲ್ಲಿ ಸ್ಟಾರ್​ ಗಿರಿ ಪಡೆಯಲು ವಿಫಲವಾಗಿದೆ.

bbmp waste management
ಬಿಬಿಎಂಪಿ ಕಸ ನಿರ್ವಹಣೆ
author img

By

Published : Jun 3, 2020, 8:05 AM IST

ಬೆಂಗಳೂರು: ಕೇಂದ್ರ ಸರ್ಕಾರ ದೇಶದ ನಗರಗಳ ಸ್ವಚ್ಛತೆ ಹಾಗೂ ಕಸ ನಿರ್ವಹಣೆಗೆ ಪ್ರತೀ ವರ್ಷ ಸರ್ವೇ ನಡೆಸಿ ರ‍್ಯಾಂಕಿಂಗ್​ ನೀಡುತ್ತದೆ. ಆದರೆ ಬೆಂಗಳೂರು ಎಷ್ಟೇ ಪ್ರಯತ್ನ ಪಟ್ಟರೂ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ಭಾಗವಹಿಸಿ ಉತ್ತಮ ರ್ಯಾಂಕಿಂಗ್ ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ಬಾರಿ ಸ್ವಚ್ಛ ಸರ್ವೇಕ್ಷಣ್ ರ‍್ಯಾಂಕಿಂಗ್​​ನಲ್ಲಿ ಕಸಮುಕ್ತ ನಗರ (ಗಾರ್ಬೇಜ್ ಫ್ರೀ ಸಿಟೀಸ್ ಸ್ಟಾರ್ ಸ್ಟೇಟಸ್-GFC), ಓಡಿಎಫ್ ಪ್ಲಸ್ ಪ್ಲಸ್ (ಬಯಲು ಶೌಚಮುಕ್ತ) ಎಂಬ ಎರಡು ಪ್ರಮುಖ ವಿಭಾಗಗಳಿದ್ದವು.

ಬಿಬಿಎಂಪಿ ಇದೇ ಮೊದಲ ಬಾರಿಗೆ ಬಯಲು ಶೌಚ ಮುಕ್ತ ನಗರ ಎಂದು ಘೋಷಿಸಿಕೊಂಡಿದೆ. ಓಡಿಎಫ್ ಪ್ಲಸ್-ಪ್ಲಸ್ ವಿಭಾಗದಲ್ಲಿ ಹೆಚ್ಚುವರಿ ಐನೂರು ಅಂಕಗಳು ಸಿಗಬಹುದೆಂಬ ನಿರೀಕ್ಷೆ ಇದೆ. ಆದರೆ ಜಿಎಫ್​​​ಸಿಯಲ್ಲಿ ಭಾಗವಹಿಸಲು ಕೆಲವು ಮಾನದಂಡಗಳಿರುವುದರಿಂದ ಬಿಬಿಎಂಪಿ ಸ್ಪರ್ಧಿಸಲು ಸಾಧ್ಯವಾಗಿಲ್ಲ‌. ರಾಜ್ಯದಲ್ಲಿ ಎರಡು ನಗರ ಮಾತ್ರ ಇದರಲ್ಲಿ ಭಾಗವಹಿಸಿದ್ದು, ಮೈಸೂರಿಗೆ ಮಾತ್ರ ಐದು ಸ್ಟಾರ್ ಸ್ಟೇಟಸ್ ಸಿಕ್ಕಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ.

ಬಿಬಿಎಂಪಿ ಕಸ ನಿರ್ವಹಣೆ

ಕಸಮುಕ್ತ ನಗರ ಸ್ಟಾರ್ ಸ್ಟೇಟಸ್ ಪಡೆಯಲು ಬೇಕಾದ ಮಾನದಂಡಗಳು

ಕಸ ಸಾಗಿಸುವ ವಾಹನಗಳಲ್ಲಿ ಜಿಪಿಎಸ್ ಅಳವಡಿಸುವುದು. ಘನತ್ಯಾಜ್ಯ ನಿರ್ವಹಣೆಗೆ ಕಂಟ್ರೋಲ್ ರೂಂ ನಿರ್ಮಾಣ. ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ 50 ಮೀಟರ್​​ಗಳಿಗೆ ಡಸ್ಟ್ ಬಿನ್ ಅಳವಡಿಕೆ ಮುಂತಾದ ಮಾನದಂಡಗಳು ಕಸ ಮುಕ್ತ ನಗರ ಸ್ಟಾರ್​ ಸ್ಟೇಟಸ್​ ಪಡೆಯಲು ಅನಿವಾರ್ಯತೆಯಿದೆ.

ಆದರೆ ಈ ವಿಭಾಗದಲ್ಲಿ ಬಿಬಿಎಂಪಿ ಕ್ವಾಲಿಫೈ ಆಗದ ಕಾರಣ ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಟಾರ್ ಗರಿಯೂ ಬಿಬಿಎಂಪಿ ಕೈತಪ್ಪಿದೆ. ಜೊತೆಗೆ ಸರ್ವೇಕ್ಷಣ್ ರ‍್ಯಾಂಕಿಂಗ್​ನಲ್ಲಿಯೂ ಅಂಕ ಕಡಿಮೆಯಾಗಲಿದೆ. ಪಾಲಿಕೆ ಜಾರಿಗೆ ತರಲು ಉದ್ದೇಶಿಸಿದ್ದ, ಹೊಸ ಟೆಂಡರ್​​ನಲ್ಲಿ ಈ ಎಲ್ಲಾ ಅಂಶಗಳಿದ್ದರೂ, ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ಬಳಿಕ ಈ ಟೆಂಡರ್​ ಸ್ಥಗಿತಗೊಳಿಸಿದೆ. ಕಳೆದ ಬಾರಿ 194 ನೇ ರ್ಯಾಂಕಿಂಗ್ ಬಂದಿದ್ದ ಬೆಂಗಳೂರು, ಈ ಬಾರಿ ಎಷ್ಟನೇ ರ‍್ಯಾಂಕಿಂಗ್​ ಪಡೆಯಲಿದೆ ಎಂದು ಕಾದುನೋಡಬೇಕಿದೆ.

ಲಾಕ್​ಡೌನ್ ಇದ್ದರೂ ಕಸ ನಿರ್ವಹಣೆಗೆ ತೊಡಕಿಲ್ಲ

ಕೋವಿಡ್ ಪರಿಸ್ಥಿತಿಯಿದ್ದರೂ, ಲಾಕ್ ಡೌನ್ ಇದ್ದರೂ ಬಿಬಿಎಂಪಿ ಒಂದು ದಿನವೂ ಕಸ ನಿರ್ವಹಣೆ ಕೆಲಸ ನಿಲ್ಲಿಸಿಲ್ಲ. ಬೆಳಗ್ಗೆ ಆರು ಗಂಟೆಯಿಂದಲೇ ಪೌರಕಾರ್ಮಿಕರ ಕೆಲಸ ಆರಂಭವಾಗುತ್ತಿತ್ತು. ಕೆಲಸದ ಅವಧಿ ಮೊದಲು ಕಡಿಮೆ ಇತ್ತು. ಈಗ ಲಾಕ್​ಡೌನ್ ಸಡಿಲಿಕೆ ಬಳಿಕ ಮತ್ತೆ ಪೂರ್ಣ ಅವಧಿಯಲ್ಲಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 10.30ರವರೆಗೆ ಕೆಲಸದ ಅವಧಿ ಇತ್ತು. ಈಗ 2.30ರವರೆಗೂ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ರಂದೀಪ್ ತಿಳಿಸಿದ್ದಾರೆ.

ಜೂನ್ 8ರ ಬಳಿಕ ಹೋಟೆಲ್, ಮಾಲ್​, ರೆಸ್ಟೋರೆಂಟ್ ತೆರೆಯುವುದರಿಂದ ಅಲ್ಲಿಯ ಕಸವೂ ಹೆಚ್ಚುವರಿಯಾಗಲಿದ್ದು ಪ್ರತಿದಿನ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ಮಿಶ್ರ ಕಸ ನೀಡದಂತೆ, ಎಲ್ಲೆಂದರಲ್ಲಿ ಎಸೆಯದಂತೆ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಇಂದೋರ್ ಮಾದರಿ ಪ್ರಯೋಗ ಬಹುತೇಕ ಸ್ಥಗಿತವಾಗಿತ್ತು. ಈಗ ಮತ್ತೆ ಆರಂಭಿಸಲಾಗುವುದು. ಐದು ವಾರ್ಡ್ ಗಳಲ್ಲಿ ಜಾರಿಯಿದ್ದ ಪ್ರಾಯೋಗಿಕ ಅವಧಿ ವಿಸ್ತರಿಸಲು ಮೇಯರ್ ಸೂಚಿಸಿದ್ದಾರೆ ಎಂದಿ ರಂದೀಪ್ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.