ETV Bharat / city

ಆ್ಯಪ್ ಮೂಲಕ ಲೋನ್ ಕೊಟ್ಟು ಕಿರುಕುಳ ನೀಡಿದ ಆರೋಪ : ಮೂವರು ಅರೆಸ್ಟ್​ - Lone Aap Fraud casethree arrested for Lone Aap Fraud case

ಹಣ ಪಡೆದವರು ಸರಿಯಾದ ಕಂತುಗಳಲ್ಲಿ ಕಟ್ಟಿದ್ದರು ಕೂಡ ಸಮಯಕ್ಕೆ ಸರಿಯಾಗಿ ಕಟ್ಟಿಲ್ಲವೆಂದು ಬಡ್ಡಿ, ಚಕ್ರಬಡ್ಡಿ ವಿಧಿಸಿ ಅವರ ಮೊಬೈಲ್ ನಂಬರ್​ಗೆ ಅಶ್ಲೀಲ ವಿಡಿಯೋಗಳನ್ನು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದರು..

ಮೂವರು ಅರೆಸ್ಟ್​
ಮೂವರು ಅರೆಸ್ಟ್​
author img

By

Published : Dec 28, 2020, 8:50 AM IST

ಬೆಂಗಳೂರು : ಆನ್​ಲೈನ್ ಆ್ಯಪ್​ಗಳ ಮೂಲಕ ಸಾರ್ವಜನಿಕರಿಗೆ ಲೋನ್ ಕೊಟ್ಟು ಬಡ್ಡಿ, ಚಕ್ರ ಬಡ್ಡಿ, ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಿ ಹೆಚ್ಚು ಹಣ ವಸೂಲಿ ‌ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಅಹ್ಮದ್, ಸೈಯದ್ ಇರ್ಫಾನ್, ಆದಿತ್ಯಾ ಸೇನಾಪರಿ ‌ಬಂಧಿತ ಆರೋಪಿಗಳು. ಇವರು ಆನ್​ಲೈನ್ ಲೋನ್ ಆ್ಯಪ್​ಗಳನ್ನು ಡೌನ್​ಲೋಡ್ ಮಾಡುವ ವ್ಯಕ್ತಿಗಳನ್ನು ಟಾರ್ಗೇಟ್ ಮಾಡುತ್ತಿದ್ದರು.

ಹಣ ಪಡೆದವರು ಸರಿಯಾದ ಕಂತುಗಳಲ್ಲಿ ಕಟ್ಟಿದ್ದರು ಕೂಡ ಸಮಯಕ್ಕೆ ಸರಿಯಾಗಿ ಕಟ್ಟಿಲ್ಲವೆಂದು ಬಡ್ಡಿ, ಚಕ್ರಬಡ್ಡಿ ವಿಧಿಸಿ ಅವರ ಮೊಬೈಲ್ ನಂಬರ್​ಗೆ ಅಶ್ಲೀಲ ವಿಡಿಯೋಗಳನ್ನು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಇದರಿಂದಾಗಿ ಮಾನಸಿಕವಾಗಿ ನೊಂದ ಕೆಲ ವ್ಯಕ್ತಿಗಳು ಸೈಬರ್ ಠಾಣೆಗೆ ದೂರು ನೀಡಿದ್ರು. ಪ್ರಕರಣದ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕೊರಮಂಗಲದಲ್ಲಿದ್ದ ಆನ್​ಲೈನ್ ಆ್ಯಪ್​ಗಳ ಮೂಲಕ ಸಾಲ ನೀಡುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಇದೇ ರೀತಿ ಬಹಳಷ್ಟು ಮಂದಿಗೆ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ.

ಇನ್ನು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಆ್ಯಪ್​ಗಳು ಚೀನಾದಾಗಿದ್ದು, ಇದರ ಮಾಲೀಕರು ಸಹ ಚೀನಾದವರಾಗಿದ್ದಾರೆ. ಮನಿ ಡೇ, ಪೈಸಾ ಪೆ, ಲೋನ್ ಟೈಂ, ರೂಪಿಕಾರ್ಟ್, ಇನ್‌ಕ್ಯಾಸ್ ಮುಂತಾದ ಆ್ಯಪ್​ ಬಳಸಿ ಗ್ರಾಹಕರಿಗೆ ಹಣ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 35 ಲ್ಯಾಪ್‌ಟಾಪ್, 200 ಬೇಸಿಕ್​ ಮೊಬೈಲ್, ವಿವಿಧ ಬ್ಯಾಂಕ್ ಚೆಕ್, 12 ವಿವೋ ಮತ್ತು 8 ಒಪೋ ಮೊಬೈಲ್, ವಿವಿಧ ಕಂಪನಿಯ 30 ಸಿಮ್ ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.