ETV Bharat / city

ಅನ್ನದಾತ ಸುಖೀಭವ : ಮಳೆ-ಬೆಳೆ-ಸಾಲಮನ್ನಾದ ಆಸರೆ ; ರಾಜ್ಯ ರೈತರ ಆತ್ಮಹತ್ಯೆಗಳು ಇಳಿಮುಖ

ರಾಜ್ಯದಲ್ಲಿ ರಾಜಕೀಯವಾಗಿ ತಲ್ಲಣ ಮೂಡಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆಮುಖವಾಗುತ್ತಿವೆ.‌ ಒಂದು ಕಾಲದಲ್ಲಿ ಸಮೂಹ ಸನ್ನಿ ರೀತಿ ರೈತರು ನೇಣಿಗೆ ಶರಣಾಗುತ್ತಿದ್ದುದು ಸರ್ಕಾರಗಳಿಗೆ ಬಹು ದೊಡ್ಡ ತಲೆನೋವಾಗಿತ್ತು. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ..

author img

By

Published : Apr 25, 2022, 9:29 AM IST

the suicide rate of farmers declining in the state
ಅನ್ನದಾತ ಸುಖಿಭವ: ಮಳೆ-ಬೆಳೆ-ಸಾಲಮನ್ನಾದ ಆಸರೆ; ರಾಜ್ಯದಲ್ಲಿ ಇಳಿಮುಖವಾಗುತ್ತಿರುವ ರೈತರ ಆತ್ಮಹತ್ಯೆ ಪ್ರಕರಣ!

ಬೆಂಗಳೂರು : ರಾಜ್ಯದಲ್ಲಿ ರಾಜಕೀಯವಾಗಿ ತಲ್ಲಣ ಮೂಡಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆಮುಖವಾಗುತ್ತಿವೆ.‌ ಒಂದು ಕಾಲ ಘಟ್ಟದಲ್ಲಿ ಸಮೂಹ ಸನ್ನಿ ರೀತಿ ರೈತರು ನೇಣಿಗೆ ಶರಣಾಗುತ್ತಿದ್ದುದು ಸರ್ಕಾರಗಳಿಗೆ ಬಹು ದೊಡ್ಡ ತಲೆನೋವಾಗಿತ್ತು. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗುತ್ತಿವೆ. ಈ ಬಗೆಗಿನ ಸಂಪೂರ್ಣ ವರದಿ ಇಲ್ಲಿದೆ.

ರಾಜಕೀಯವಾಗಿ ಕಂಪನ‌ ಮೂಡಿಸುವ ಆತ್ಮಹತ್ಯೆ : ರೈತರ ಆತ್ಮಹತ್ಯೆಗಳು ರಾಜಕೀಯವಾಗಿ ಭಾರೀ ತಲ್ಲಣ ಮೂಡಿಸುತ್ತವೆ. ರೈತರ ಆತ್ಮಹತ್ಯೆಗಳು ರಾಜಕೀಯ ಗುದ್ದಾಟದ ಕೇಂದ್ರ ಬಿಂದುವಾಗಿವೆ. ಕರ್ನಾಟಕ ರಾಜ್ಯ ಇಂಥ ರಾಜಕೀಯ ಕಂಪನಕ್ಕೆ ಸಾಕ್ಷಿಯಾಗಿದೆ.

ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಸರಣಿ ಸರ್ಕಾರವನ್ನೇ ಅಲುಗಾಡಿಸಿತ್ತು. ಸಾಲು ಸಾಲು ಬರದ ಹಿನ್ನೆಲೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದವು.‌ ಪ್ರತಿ ದಿನ ರೈತರ ಆತ್ಮಹತ್ಯೆ ಪ್ರಕರಣ ಬಗ್ಗೆ ಎಸ್.ಎಂ.ಕೃಷ್ಣ ವಿರುದ್ಧ ಪ್ರತಿಪಕ್ಷಗಳು ಮುಗಿ ಬಿದ್ದಿದ್ದವು.‌ ಬಳಿಕ ರೈತರ ಹಾಗೂ ಗ್ರಾಮೀಣ ಭಾಗದ ಜನರ ಆಕ್ರೋಶಕ್ಕೆ ತುತ್ತಾಗಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನವಾಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳಬೇಕಾಯಿತು. 1998ರಿಂದ 2006ರವರೆಗೆ ರಾಜ್ಯದಲ್ಲಿ ಸುಮಾರು 19,000 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಇದರಲ್ಲಿ ವೈಯ್ಯಕ್ತಿಕ‌ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಸೇರಿವೆ ಎಂದು ಹೇಳಲಾಗಿದೆ.

ಬಳಿಕ ಬಂದ ಸರ್ಕಾರಗಳಿಗೂ ರೈತನ ಆತ್ಮಹತ್ಯೆಯ ಬಿಸಿ ತಟ್ಟಿತ್ತು. ಅದಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಸರ್ಕಾರಗಳೂ ಹೊರತಾಗಿಲ್ಲ. ಸಿದ್ದರಾಮಯ್ಯರ ಸರ್ಕಾರದ ಅವಧಿ 2015-16ರಲ್ಲಿ ಅತಿ ಹೆಚ್ಚು ಅಂದರೆ 1,062 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2017-18ರಲ್ಲಿ 1,051 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಅಧಿಕಾರದ ಮೂರು ವರ್ಷಗಳಲ್ಲಿ ಒಟ್ಟು 3,045 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಪ್ರತಿಪಕ್ಷ ಮಾತ್ರವಲ್ಲ ಸ್ವಪಕ್ಷೀಯರಿಂದಲೂ ತೀವ್ರ ವಾಗ್ದಾಳಿಗೆ ಗುರಿಯಾಗಿತ್ತು.

ಉತ್ತಮ ಮಳೆ-ಬೆಳೆ, ಸಾಲ‌ಮನ್ನಾಗೆ ರೈತರ ಆತ್ಮಹತ್ಯೆ ಇಳಿಮುಖ : ಶುಭ ಸೂಚಕ ಏನೆಂದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅನ್ನದಾತನ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ನೇಗಿಲಯೋಗಿಯ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿರುವುದು ಸರ್ಕಾರವೂ ಸೇರಿ ನಾವೆಲ್ಲರೂ ನಿಟ್ಟುಸಿರು ಬಿಡುವ ವಿಚಾರ. ಆವತ್ತು ರಾಜಕೀಯವಾಗಿ ಬಿರುಗಾಳಿ ಎಬ್ಬಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ಯ ಇಳಿಮುಖವಾಗಿವೆ.

2018-19ರಲ್ಲಿ ಆರ್ಥಿಕ ಸಂಕಷ್ಟಕ್ಕೆ ರೈತರ ಆತ್ಮಹತ್ಯೆ ಪ್ರಕರಣ 867 ದಾಖಲಾಗಿದ್ದರೆ, 2019- 20ರಲ್ಲಿ 884 ಹಾಗೂ 2020-21ರಲ್ಲಿ 637 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಅಂಕಿ-ಅಂಶ ಪರಿಹಾರಕ್ಕಾಗಿ ಸರ್ಕಾರ ಪರಿಗಣಿಸಿದ ಅರ್ಹ ಆತ್ಮಹತ್ಯೆ ಪ್ರಕರಣವಾಗಿವೆ. ರೈತರ ಆತ್ಮಹತ್ಯೆ ಇಳಿಮುಖವಾಗುತ್ತಿರುವುದರಿಂದ ಇತ್ತೀಚಿನ‌ ಕೆಲ ವರ್ಷಗಳಿಂದ ಅದು ರಾಜಕೀಯ ಹೊಯ್ದಾಟದ ವಿಚಾರವಾಗಿ ಮುನ್ನಲೆಗೆ ಬರುತ್ತಿಲ್ಲ.

ಇದಕ್ಕೆ ಪ್ರಮುಖ ಕಾರಣ ಉತ್ತಮ ಮುಂಗಾರು, ಹಿಂಗಾರು. ಕಳೆದ ನಾಲ್ಕು ವರ್ಷಗಳಲ್ಲಿ ಬರಗಾಲ ಕಣ್ಮರೆಯಾಗಿದ್ದು, ಉತ್ತಮ ಮಳೆ, ಬೆಳೆಯಾಗುತ್ತಿದೆ. ಇದರ ಜೊತೆಗೆ ಸರ್ಕಾರದಿಂದ ರೈತರ ಸಾಲ‌ಮನ್ನಾವೂ ದೊಡ್ಡ ಕೊಡುಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ, ಜಗದೀಶ್ ಶೆಟ್ಟರ್ ಸರ್ಕಾರ, ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿನ ಸಾಲ ಮನ್ನಾ ಯೋಜನೆ ರೈತರ ನೆರವಿಗೆ ಬಂದಿದೆ. ಇನ್ನು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಪರ ಯೋಜನೆಗಳಿಂದ ಆತ್ಮಹತ್ಯೆ ಪ್ರಕರಣ ಇಳಿಮುಖ‌ವಾಗುತ್ತಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ರೈತ ಮುಖಂಡರು ಈ ವಾದವನ್ನು ಅಲ್ಲಗಳೆದಿದ್ದಾರೆ.‌ ಸಾಲ‌ಮನ್ನಾದಿಂದ ರೈತರ ಆತ್ಮಹತ್ಯೆ ಕಡಿಮೆಯಾಗಿಲ್ಲ. ಕೋವಿಡ್‌ನಿಂದ ರೈತರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಸಮಸ್ಯೆ ಉಲ್ಬಣವಾಗಿದೆ. ಸರ್ಕಾರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಲು ಕ್ರಮವಹಿಸಬೇಕು. ಆಗ ರೈತರಿಗೆ ಅನುಕೂಲವಾಗಲಿದೆ. ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ

2021-22ರಲ್ಲಿ ಸ್ವಲ್ಪ ಏರಿಕೆ ಕಂಡ ಆತ್ಮಹತ್ಯೆ : ಕಂದಾಯ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ 2021-22ರಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ತುಸು ಏರಿಕೆ ಕಂಡಿವೆ. 2021-22ರಲ್ಲಿ ರಾಜ್ಯದಲ್ಲಿ 795 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ 2020-21ರಲ್ಲಿ 637 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ, 2021-22ರಲ್ಲಿ 158 ಅಧಿಕ ಆತ್ಮಹತ್ಯೆಗಳಾಗಿವೆ ಎಂದು ಹೇಳಲಾಗಿದೆ. ಈ ಅಂಕಿ-ಅಂಶಗಳ ಪರಿಶೀಲನೆ ಬಳಿಕ ಸರ್ಕಾರ ಪರಿಹಾರಕ್ಕಾಗಿ ಪರಿಗಣಿಸಲ್ಪಟ್ಟ ಅರ್ಹ ಆತ್ಮಹತ್ಯೆ ಪ್ರಕರಣಗಳಾಗಿವೆ.

ಈ ಅಂಕಿ ಅಂಶದಂತೆ ಹಾವೇರಿ ಜಿಲ್ಲೆಯಲ್ಲಿ 95 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಕೊಂಡ ಜಿಲ್ಲೆಯಾಗಿದೆ. ಮೈಸೂರು ಎರಡನೇ ಸ್ಥಾನದಲ್ಲಿದ್ದು, ಒಟ್ಟು 89 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ 72 ರೈತರು, ಯಾದಗಿರಿ 50, ಮಂಡ್ಯ 48, ಶಿವಮೊಗ್ಗ 46, ಬೀದರ್ 45, ಧಾರವಾಡ 41, ಚಿಕ್ಕಮಗಳೂರು 36 ಹಾಗೂ ಕಲಬುರ್ಗಿಯಲ್ಲಿ 34 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. 795 ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 39.75 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

the suicide rate of farmers declining in the state
ರಾಜ್ಯದ ಜಿಲ್ಲಾವಾರು ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತು ಬಿಡುಗಡೆಗೊಳಿಸಲಾದ ಅನುದಾನದ ವಿವರ

ಓದಿ : ರಾಜ್ಯದಲ್ಲಿಂದು 60 ಮಂದಿಗೆ ಕೊರೊನಾ‌ ಸೋಂಕು ದೃಢ: ಶೂನ್ಯ ಸಾವು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.