ಬೆಂಗಳೂರು: ರಮೇಶ್ ಆಪ್ತರು ಪೊಲೀಸ್ ಠಾಣೆಗೆ ದೂರು ನೀಡುದ್ದು, ಅದರನ್ವಯ ದೂರು ದಾಖಲಾಗುತ್ತದೆ. ಬಳಿಕ ಮುಂದಿನ ಕ್ರಮವನ್ನು ಕಾನೂನಾತ್ಮಕವಾಗಿ ಪೊಲೀಸರು ತೆಗೆದುಕೊಳ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಮೇಶ್ ಆಪ್ತರಿಂದ ದೂರು ವಿಚಾರವಾಗಿ ಕೆಕೆ ಗೆಸ್ಟ್ ಹೌಸ್ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ದೂರನ್ನು ಎಸ್ಐಟಿಗೆ ತೆಗೆದು ಕೊಳ್ಳಬೇಕಾ, ಬೇಡವಾ ಎಂಬುದರ ಬಗ್ಗೆ ಎಸ್ಐಟಿ ಮುಖ್ಯಸ್ಥರು ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.
ಒಂದು ಸಾರಿ ಎಸ್ಐಟಿಗೆ ಕೊಟ್ಟ ಮೇಲೆ ನಾನು ಯಾವುದೇ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಸದ್ಯ ತನಿಖೆ ನಡೆಯುತ್ತಿದೆ, ಎಲ್ಲವೂ ಹೊರಗೆ ಬರುತ್ತೆ ಎಂಬ ವಿಶ್ವಾಸ ಇದೆ. ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ಎಸ್ಐಟಿಯವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.