ETV Bharat / city

ಅನಗತ್ಯ ಪ್ರಚೋದನೆ ಮಾಡುವುದು ಬಿಜೆಪಿ ನಾಯಕರ ಉದ್ದೇಶ : ಸಿದ್ದರಾಮಯ್ಯ

author img

By

Published : Apr 10, 2022, 3:11 PM IST

ಇದೆಲ್ಲವೂ ರಾಜ್ಯದ ಜನರಿಗೆ ಅರ್ಥವಾಗುತ್ತದೆ. ಹಿಜಾಬ್ ಗದ್ದಲದಿಂದ ಇಲ್ಲಿಯವರೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈಗ ಜನ ಬಿಜೆಪಿಯವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದರು. ಯಾವುದೇ ಪ್ರಕರಣದಲ್ಲಿ ನಾವು ತಪ್ಪಿತಸ್ಥರು, ಕಾನೂನಿಗೆ ವಿರುದ್ಧವಾಗಿ ವರ್ತಿಸುವವರ ಪರ ನಿಲ್ಲುವುದಿಲ್ಲ. ಯಾರೇ ತಪ್ಪು ಮಾಡಿದರೂ, ಕಾನೂನು ಉಲ್ಲಂಘಿಸಿದರೂ ಶಿಕ್ಷೆಯಾಗಲಿ..

Siddaramaih talked to Press
ಸುದ್ದಿಗಾರರ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು : ಚಾಮರಾಜಪೇಟೆ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಿ.ಟಿ.ರವಿ, ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತರ ಹೇಳಿಕೆಗಳು ವಿಭಿನ್ನವಾಗಿವೆ. ಪ್ರಚೋದನೆ ಮಾಡುವುದು ಬಿಜೆಪಿ ನಾಯಕರ ಉದ್ದೇಶ. ಇದು ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ..

ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂಗಳನ್ನು ಪ್ರಚೋದಿಸುವುದು ಇವರ ಉದ್ದೇಶ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇವರಿಂದ ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ದೇಶ, ರಾಜ್ಯ ಅಭಿವೃದ್ಧಿ ಆಗುವುದಿಲ್ಲ.

ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ, ವೋಟಿಗಾಗಿ‌ ಭಾಷೆ, ಧರ್ಮ, ದ್ವೇಷದ ವಿಚಾರವನ್ನು ಮುಂದೆ ತಂದು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಎನ್​ಐಗೆ ವಹಿಸಲಾಗಿದೆ. ಯಾರಾದರೂ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸರ್ಕಾರ ಇದೇ ನಿಲುವನ್ನು ದಿನೇಶ್ ಮತ್ತು ಸುಭಾನ್ ಹತ್ಯೆ ವಿಚಾರದಲ್ಲಿಯೂ ಅನುಸರಿಸಲಿ ಎಂದರು.

ದಿನೇಶ್ ಕೊಲೆಗೆ ಭಜರಂಗದಳ, ಸುಭಾನ್ ಹತ್ಯೆಗೆ ಶ್ರೀರಾಮಸೇನೆ ಕಾರಣ. ಹರ್ಷ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಿದಂತೆ ದಿನೇಶ್ ಮತ್ತು ಸುಭಾನ್ ಕುಟುಂಬದವರಿಗೂ ಕೊಡಲಿ. ಕಾನೂನು ಎಲ್ಲರಿಗೂ ಒಂದೇ. ಇದರಲ್ಲಿ ತಾರತಮ್ಯ ಬೇಡ. ಬಿಜೆಪಿಯವರು ದ್ವೇಷ ರಾಜಕಾರಣದ ಮೂಲಕ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದೆಲ್ಲವೂ ರಾಜ್ಯದ ಜನರಿಗೆ ಅರ್ಥವಾಗುತ್ತದೆ. ಹಿಜಾಬ್ ಗದ್ದಲದಿಂದ ಇಲ್ಲಿಯವರೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈಗ ಜನ ಬಿಜೆಪಿಯವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದರು. ಯಾವುದೇ ಪ್ರಕರಣದಲ್ಲಿ ನಾವು ತಪ್ಪಿತಸ್ಥರು, ಕಾನೂನಿಗೆ ವಿರುದ್ಧವಾಗಿ ವರ್ತಿಸುವವರ ಪರ ನಿಲ್ಲುವುದಿಲ್ಲ. ಯಾರೇ ತಪ್ಪು ಮಾಡಿದರೂ, ಕಾನೂನು ಉಲ್ಲಂಘಿಸಿದರೂ ಶಿಕ್ಷೆಯಾಗಲಿ.

ಕಾನೂನು ಸುವ್ಯವಸ್ಥೆ ಸರಿ ಇಲ್ಲ, ದ್ವೇಷದ ವಾತಾವರಣ ಇದೆ. ಸಮಾಜದಲ್ಲಿ ಅಶಾಂತಿ ಉಂಟಾಗಿದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ರಾಜ್ಯದಿಂದ ಹೊರಗೆ ಹೋಗುತ್ತಿವೆ. ಬಂಡವಾಳ ಬರಬೇಕಾದರೆ ರಾಜ್ಯದಲ್ಲಿ ಉತ್ತಮ ವಾತಾವರಣ ಇರಬೇಕು. ಹಾಗಿದ್ದಂತಹ ವಾತಾವರಣವನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಚಾಮರಾಜಪೇಟೆ ಚಂದ್ರು ಹತ್ಯೆ ಪ್ರಕರಣ.. ನ್ಯಾಯಾಂಗ ತನಿಖೆಗೆ ಉಗ್ರಪ್ಪ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.