ಬೆಂಗಳೂರು: ಲಾಕ್ಡೌನ್ನಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜೋಪಡಿ ಹಾಗೂ ಶೆಡ್ಗಳಲ್ಲಿ ವಾಸಿಸುವ ವಲಸಿಗ ಕೂಲಿ ಕಾರ್ಮಿಕರ 35 ಕುಟುಂಬಗಳನ್ನು ಪೊಲೀಸರು ದತ್ತು ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ಜಾರಿ ಆದಾಗಿನಿಂದ ಈವರೆಗೂ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರು ಊಟ, ನೀರಿಲ್ಲದೆ ದಿನ ದೂಡುತ್ತಿದ್ದಾರೆ. ಸಂಕಷ್ಟದಲ್ಲಿ ಇರುವವರ ನೆರವಿಗೆ ಬೆಂಗಳೂರಿನ ಆಡುಗೋಡಿ ಪೊಲೀಸರು ಮುಂದಾಗಿದ್ದಾರೆ.
ಲಕ್ಕಸಂದ್ರದ ಗುಲ್ಬರ್ಗ ಕಾಲೊನಿಯಲ್ಲಿ ನೆಲೆಸಿರುವ 35 ಕುಟುಂಬಗಳ ನೂರಾರು ಜನರಿಗೆ ಲಾಕ್ಡೌನ್ ಮುಗಿಯುವ ತನಕ ಅಗತ್ಯ ವಸ್ತುಗಳ ಕೊರತೆ ಬಾರದಂತೆ ನೋಡಿಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಯಾದಗಿರಿ, ರಾಯಚೂರು, ಕಲಬುರಗಿ ಭಾಗದ ಕಾರ್ಮಿಕರು ಹಲವು ವರ್ಷಗಳಿಂದ ಇಲ್ಲಿಯೇ ಕಟ್ಟಡ ನಿರ್ಮಾಣದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಹೇರಿದ ಪರಿಣಾಮ ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ಊರಿಗೂ ಹೋಗಲಾರದೆ ಬದುಕು ಅತಂತ್ರವಾಗಿದೆ.
ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಸ್ಥಿತಿ ಕಂಡ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಅವರು, ಠಾಣೆ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ, ಸ್ವಯಂಪ್ರೇರಿತ ಸಹಾಯ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಸಿಬ್ಬಂದಿ ತನು- ಮನದಿಂದಲೇ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದರು. ಇದರಂತೆ ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ದಿನಸಿ ಕಿಟ್ ನೀಡಲಾಗುತ್ತಿದೆ. ಅಕ್ಕಿ, ಎಣ್ಣೆ, ಉಪ್ಪು, ಮಸಾಲೆ, ಅರಿಶಿನ, ಬೇಳೆ, ಟೂತ್ ಫೇಸ್ಟ್, ತರಕಾರಿ ವಿತರಿಸಲಾಗುತ್ತದೆ ಎಂದು 'ಈಟಿವಿ ಭಾರತ್'ಗೆ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಮಾಹಿತಿ ನೀಡಿದರು.
ಒಂದೇ ಬಾರಿಗೆ ಹೆಚ್ಚು ಪಡಿತರ ವಿತರಿಸಿದರೆ ದುರುಪಯೋಗವಾಗುವ ಸಾಧ್ಯತೆಯಿದೆ. ಹೀಗಾಗಿ, ಎರಡು ದಿನಕ್ಕೊಮ್ಮೆ ಅವರ ಬೇಕು-ಬೇಡಿಕೆಗಳನ್ನು ನಾವೇ ಹೋಗಿ ಪರಿಶೀಲಿಸುತ್ತೇವೆ. ಲಾಕ್ಡೌನ್ ಮುಗಿಯುವ ತನಕ ಕೈಲಾದಷ್ಟು ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದರು.