ETV Bharat / city

ಅಪ್ಪು ಮನೆಗೆ ಭೇಟಿ ನೀಡಿದ ನಟಿ ತಾರಾ ಅನುರಾಧಾ.. ಆತ್ಮಹತ್ಯೆ ಮಾಡಿಕೊಳ್ಳದಂತೆ ಪುನೀತ್​ ಅಭಿಮಾನಿಗಳಿಗೆ ಮನವಿ - ಪುನೀತ್ ಪತ್ನಿ ಅಶ್ವಿನಿ

ಪುನೀತ್ ಪತ್ನಿ ಅಶ್ವಿನಿ ತುಂಬಾ ಧೈರ್ಯದಿಂದ ಇದ್ದಾರೆ. ಅವರಿಗೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆ. ದಯವಿಟ್ಟು ಯಾರೂ ಕೂಡ ಆತ್ಮಹತ್ಯೆ ‌ಮಾಡಿಕೊಳ್ಳಬೇಡಿ ಎಂದು ನಟಿ ತಾರಾ ಅನುರಾಧಾ ಅವರು ಅಪ್ಪು ಅಭಿಮಾನಿಗಳಿಗೆ ಮನವಿ ಮಾಡಿದರು.

ತಾರಾ ಅನುರಾಧಾ
ತಾರಾ ಅನುರಾಧಾ
author img

By

Published : Nov 5, 2021, 2:21 PM IST

ಬೆಂಗಳೂರು: ಅಪ್ಪು ನಮ್ಮನ್ನು ಬಿಟ್ಟು ಹೋಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಭಾರತದ ಚಿತ್ರರಂಗಕ್ಕೆ ದೊಡ್ಡ ಶಾಕ್ ಎಂದು ನಟಿ ತಾರಾ ಅನುರಾಧಾ ಬೇಸರ ವ್ಯಕ್ತಪಡಿಸಿದರು.

ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆ ಅಪ್ಪು ಮನೆಗೆ ಇಂದು ಭೇಟಿ ನೀಡಿ, ಕುಟುಂಬಸ್ಥರ ಸಾಂತ್ವನ ಹೇಳಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಕತಾಳೀಯ ಎಂಬಂತೆ ಅಪ್ಪು 46 ನೇ ವರ್ಷಕ್ಕೆ ನಿಧನರಾಗಿದ್ದಾರೆ. ಅವರು ನಿಧನರಾದ 46 ಗಂಟೆಗಳ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಭಗವಂತ ಚಿತ್ರರಂಗಕ್ಕೆ ಇಂತಹ ಸಂಕಷ್ಟವನ್ನು ಕೊಡಬಾರದು. ಈ ನೋವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ತಾರಾ ಅನುರಾಧಾ

ಪುನೀತ್ ಪತ್ನಿ ಅಶ್ವಿನಿ ತುಂಬಾ ಧೈರ್ಯದಿಂದ ಇದ್ದಾರೆ. ಅವರಿಗೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆ. ಅಭಿಮಾನಿಗಳು ಅಪ್ಪು ಆದರ್ಶಗಳನ್ನು ಪಾಲಿಸಿ, ಅವರ ಕುಟುಂಬದ ಜೊತೆ ನಿಲ್ಲಿ. ದಯವಿಟ್ಟು ಯಾರೂ ಆತ್ಮಹತ್ಯೆ ‌ಮಾಡಿಕೊಳ್ಳಬೇಡಿ. ಅಪ್ಪು ಅಂತ್ಯಕ್ರಿಯೆಗೆ ಅನುಕೂಲ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.