ಬೆಂಗಳೂರು: ಕೋವಿಡ್ ಮತ್ತು ಇತರೆ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಇಂದು ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆದಿದೆ. 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಮುಖ್ಯಮಂತ್ರಿಗಳ ನಿರ್ದೇಶನ ನೀಡಿದ್ದಾರೆ. ಒಂದು ವಾರದೊಳಗೆ ಹೆಚ್ಚುವರಿ 3,000 ಹಾಸಿಗೆಗಳು ಸೇರ್ಪಡೆ ಆಗಲಿದೆ. ಇನ್ನು ಸಭೆಗೆ ಹಾಜರಾಗದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಅಂತಲೂ ತಿಳಿಸಿದರು.
ಇನ್ನು ಲಕ್ಷಣರಹಿತ ಮತ್ತು ಅಲ್ಪ ಲಕ್ಷಣವುಳ್ಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ ಮಾಡುವ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆ ಹೊರಡಿಸಿದೆ ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ ಅಂತ ತಿಳಿಸಿದರು.
ರಾಜ್ಯದಲ್ಲಿ ಇದುವರೆಗೆ 21,775 ಜನರು ಗುಣಮುಖರಾಗಿದ್ದು, ಇಂದು ರಾಜ್ಯದಲ್ಲಿ 24,909 ಆರ್ಟಿಪಿಸಿಅರ್ (RTPCR) ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಈಗ 85 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ 50,000 ಆರ್ಟಿಪಿಸಿಆರ್ ಟೆಸ್ಟ್ ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ 9.8 ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಪರೀಕ್ಷೆ ನಡೆಸಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ 149 ಪರೀಕ್ಷೆ ನಡೆಸಬೇಕಾಗಿದ್ದು, ರಾಜ್ಯದಲ್ಲಿ 300 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಆಂಟಿಜೆನ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ. ಈ ಪರೀಕ್ಷೆ ನಡೆಸುವ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಮಾಹಿತಿ ನೀಡಿದ್ದರು.
ಕೋವಿಡ್ ಸಮಯದಲ್ಲಿ ಶಾಲೆ ಆರಂಭ ಚಿಂತನೆ ಸರಿಯಲ್ಲ : ಡಾ ಅರವಿಂದ್ ಶೆಣೈ
ಮಕ್ಕಳ ತಜ್ಞ ಡಾ. ಅರವಿಂದ ಶೆಣೈ ಮಾತಾನಾಡಿ, ಶಾಲೆ ಶುರುವಾದ ಮೆಲೆ ಕೋವಿಡ್ ಹೆಚ್ಚಾಗಿದೆ. ಶಾಲೆ ಆರಂಭದ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಸ್ವಿಡನ್ ದೇಶದಲ್ಲಿ ಶಾಲೆ ಆರಂಭಿಸಿದರು. ಈಗ ಅಲ್ಲಿ ಯೋಚನೆ ಮಾಡುವ ಪರಿಸ್ಥಿತಿ ಇದೆ. ಆನ್ ಲೈನ್ ಕ್ಲಾಸ್ ಚಿಕ್ಕಮಕ್ಕಳಿಗೆ ಉತ್ತಮ ವಲ್ಲ, ಕೋವಿಡ್ ಕಡಿಮೆ ಆಗುವವರೆಗೆ ಶಾಲೆ ತೆರೆಯದೇ ಇರೋದು ಉತ್ತಮ ಎಂದು ಸಲಹೆ ನೀಡಿದರು.
ನಾನ್ ಕೋವಿಡ್ ಕಾಯಿಲೆ ಕಡಿಮೆ:
ಮಕ್ಕಳಲ್ಲಿ ನಾನ್ ಕೋವಿಡ್ ಕಾಯಿಲೆ ಕಡಿಮೆ ಆಗಿದೆ. ಅವರು ಹೊರಗೆ ಹೋಗ್ತಿಲ್ಲ ಹಾಗೂ ಆಹಾರ ಕ್ರಮ ಚೆನ್ನಾಗಿ ಇದೆ. ಹೀಗಾಗಿ ಇತರೆ ಅನಾರೋಗ್ಯ ಸಮಸ್ಯೆ ಕಡಿಮೆ ಆಗಿದೆ. ವ್ಯಾದಿ ಕಡಿಮೆ ಆಗಿದ್ದು, ಮಕ್ಕಳನ್ನ ಪೋಷಕರು ಹೆಚ್ಚು ಮುತುವರ್ಜಿ ವಹಿಸಿದ್ದಾರೆ ಅಂತ ಡಾ ಅರವಿಂದ್ ಶೆಣೈ ತಿಳಿಸಿದರು. ಯೋಗ ಮಾಡುವುದು, ಪೌಷ್ಟಿಕಾಹಾರ ಸೇವಿಸುದು ಉತ್ತಮ ಅಂತ ಸಲಹೆ ನೀಡಿದರು.
ಇನ್ನು ಸಚಿವ ಸುಧಾಕರ್ ಮಾತಾನಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭವಿಲ್ಲ. ಮಕ್ಕಳನ್ನ ವೃದ್ಧರನ್ನ ಹೊರಗೆ ಕಳಿಸದೇ ರಕ್ಷಣೆ ಮಾಡುವ ಅಗತ್ಯವಿದೆ ಅಂತ ಸಚಿವರು ತಿಳಿಸಿದರು.