ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ. ಬರೋಬ್ಬರಿ ₹ 38,451.11 ಕೋಟಿ ನೆರೆಯಿಂದ ಹಾನಿ ಸಂಭವಿಸಿದೆ ಎಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿದೆ.
ಹಾನಿ ಮತ್ತು ನಷ್ಟದ ವಿವರ:
- 8.88 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿ
- 21,818 ಕಿಲೋ ಮೀಟರ್ ರಸ್ತೆ ಹಾನಿ (4,119 ಕಿ.ಮೀ. ರಾಜ್ಯ ಹೆದ್ದಾರಿ, 14,921 ಕಿ.ಮೀ. ಗ್ರಾಮೀಣ ರಸ್ತೆ, 2,778 ಕಿ.ಮೀ ನಗರ ರಸ್ತೆಗಳು)
- 2,47,628 ನೆಲಕಚ್ಚಿದ ಮನೆಗಳು
- 2,193 ಸಂಪೂರ್ಣ ಕಿತ್ತುಹೋದ ಸೇತುವೆಗಳು
- 1,550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಟ್ಯಾಂಕ್ಗಳು ಹಾನಿ
- 10,988 ಸರ್ಕಾರಿ ಕಟ್ಟಡಗಳು ಹಾನಿ
ತುರ್ತು ಪರಿಹಾರ ಕ್ರಮಗಳ ಸ್ಥಿತಿಗತಿ:
- 103 ತಾಲೂಕುಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ₹ 374 ಕೋಟಿ ಅನುದಾನ ಬಿಡುಗಡೆ
- ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ ₹ 10,000 ಪರಿಹಾರ
- ಈವರೆಗೆ 1.97 ಲಕ್ಷ ಕುಟುಂಬಗಳಿಗೆ ವಿತರಿಸಿದ ಪರಿಹಾರ ₹ 198 ಕೋಟಿ