ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದಿದೆ. ರಾಜ್ಯಾದ್ಯಂತ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಿಂದ ಆರಂಭವಾಗಲಿದೆ. 34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. ಈ ಕಾರ್ಯಕ್ಕಾಗಿ 60,000 ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಇತ್ತ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ದರಗಳನ್ನ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕತ ದರ ಹೀಗಿದೆ : ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರು ಹಾಗೂ ಉಪಮುಖ್ಯ ಅಧೀಕ್ಷಕರ ಸಂಭಾವನೆ ಈ ಕೆಳಗಿನಂತಿದೆ.
- ಜಂಟಿ ಮುಖ್ಯ ಪರೀಕ್ಷಕರು - 7270 ರೂ.
- ಉಪ ಮುಖ್ಯ ಪರೀಕ್ಷಕರು - 5464 ರೂ.
ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳು (ಪ್ರತಿ ಪತ್ರಿಕೆಗೆ)
- ಪ್ರಥಮ ಭಾಷೆ- 23 ರೂ.
- ದ್ವಿತೀಯ/ತೃತೀಯ ಭಾಷೆ- 21 ರೂ.
- ಐಚ್ಛಿಕ ವಿಷಯಗಳು- 21 ರೂ.
ಭತ್ಯೆ..
- ದಿನಭತ್ಯೆ (ಬೆಂಗಳೂರು) - 596 ರೂ.
- ದಿನ ಭತ್ಯೆ (ಇತರೆ ಸ್ಥಳ) - 469 ರೂ.
- ಸ್ಥಳೀಯ ಭತ್ಯೆ (ಬೆಂಗಳೂರು) - 234
- ಸ್ಥಳೀಯ ಭತ್ಯೆ (ಇತರೆ ಸ್ಥಳಗಳು) -189
- ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ - 4515
- ಕ್ಯಾಂಪ್ ಸಹಾಯಕರು - 1260
- ಡಿ ದರ್ಜೆ ಸಿಬ್ಬಂದಿ -630