ETV Bharat / city

ಆಶ್ರಯ ಮನೆಗಾಗಿ ಕಚೇರಿಗಳತ್ತ ಅಲೆಯುತ್ತಿರುವ ಬಡವರು, ನಿರ್ಗತಿಕರು!

ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸರ್ಕಾರ ನೂರಾರು ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ ಕೆಲವೆಡೆ ಆ ಬಡಾವಣೆಗಳಲ್ಲಿ ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿವೆ. ಈ ಕುರಿತು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ.

Shelter for the needy
ಮೂಲಭೂತ ಸೌಲಭ್ಯ ಇಲ್ಲದ ನಿರಾಶ್ರಿತ ಬಡಾವಣೆಗಳು
author img

By

Published : Sep 29, 2020, 1:35 PM IST

ಬೆಂಗಳೂರು: ಸರ್ಕಾರ ಪ್ರತೀ ವರ್ಷವೂ ನಿರ್ಗತಿಕರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡುತ್ತದೆ. ಆದರೂ ಮನೆ ನೀಡಿ ಎಂದು ಅರ್ಜಿ ಹಿಡಿದುಕೊಂಡು ಕಚೇರಿಗಳತ್ತ ಬಡವರು ಸುತ್ತಾಡುವುದು ತಪ್ಪಿಲ್ಲ.

ಸರ್ಕಾರದ ವಿವಿಧ ಯೋಜನೆಗಳಲ್ಲಿ ಬಡವರು ಹಾಗೂ ನಿರ್ಗತಿಕರಿಗೆ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಆ ಮನೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವ ಹಾಗಿದೆ. ಯಾರಿಗೋ ಮನೆ ಮಂಜೂರು ಆಗಿದ್ದು, ಅಲ್ಲಿ ವಾಸಿಸುವವರು ಯಾರೋ ಎಂಬ ಪ್ರಶ್ನೆ ಉದ್ಭವವಾಗಿದೆ. ಇಷ್ಟಾದರೂ ಮನೆ ರಹಿತ ಕುಟುಂಬಗಳು ಮನೆ ನೀಡಿ ಎಂದು ಅರ್ಜಿ ಹಿಡಿದುಕೊಂಡು ಕಚೇರಿಗಳತ್ತ ಸುತ್ತಾಡುತ್ತಲೇ ಇದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಇರುವಂತೆ ವಿಜಯಪುರ ಜಿಲ್ಲೆಯಲ್ಲಿ ಕೂಡ ಲಕ್ಷಾಂತರ ಜನ ಸೂರಿಲ್ಲದೆ ಬದುಕು ಸಾಗಿಸುತ್ತಿದ್ದಾರೆ. ನಗರದಲ್ಲಿ ಸದ್ಯ 3.50 ಲಕ್ಷ ಜನಸಂಖ್ಯೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಟ್ಟು 1,722 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. 10 ವರ್ಷಗಳ ಹಿಂದೆ ನಿರ್ಮಿಸಿದ ಈ ಆಶ್ರಯ ಮನೆಗಳಲ್ಲಿ ಕೇವಲ 286 ಕುಟುಂಬಗಳು ಮಾತ್ರ ವಾಸಿಸುತ್ತಿವೆ.

ಇನ್ನು ಕೆಲವೆಡೆ ಮನೆಯ ಮೂಲ ಮಾಲೀಕರು ಮನೆಯ ಬಾಗಿಲಿಗೆ ಚೀಟಿ ಅಂಟಿಸಿ ಇಲ್ಲಿ ವಾಸವಿದ್ದರೆ ಅಂಥವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದೆನ್ನೆಲ್ಲಾ ಗಮನಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ಎನ್​​​​​ಜಿಓ ಹಾಗೂ ಸಿಬ್ಬಂದಿ ಮೂಲಕ ಜಂಟಿ ಸಮೀಕ್ಷೆ ನಡೆಸಿ,1450 ಮನೆಗಳ ಮಾಲೀಕರ ಬಳಿ ಇರುವ ಖರೀದಿ ಪತ್ರ ರದ್ದುಗೊಳಿಸಿದ್ದಾರೆ.

ಅದರ ಬದಲು ಸದ್ಯ ವಾಸಿಸುವ ಮನೆ ಇಲ್ಲದ ಬಡವರಿಗೆ ಪಾಲಿಕೆ ವೆಬ್​​ಸೈಟ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಮನೆ ಇಲ್ಲದವರಿಗೆ ಮನೆ ನೀಡಿ ಅವರಿಗೆ ಹಕ್ಕುಪತ್ರ ವಿತರಿಸುವ ಯೋಜನೆ ಹಾಕಿಕೊಂಡಿದೆ. ಈಗೆಲ್ಲಾ ಅವು ಪಾಳು ಬಿದ್ದಿದ್ದು, ವಾಸವಿರಲು ಯೋಗ್ಯವಲ್ಲವಾಗಿವೆ. ಸದ್ಯ ವಾಸಿಸುವ ಮನೆಯ ಹಕ್ಕುಪತ್ರ ನೀಡಿದರೆ ಅದನ್ನು ರಿಪೇರಿ ಮಾಡಿಸಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುತ್ತಾರೆ ನೊಂದವರು.

ಇದರ ಜತೆಗೆ ನಗರದಲ್ಲಿ ನಿರಾಶ್ರಿತ ಬಡವರಿಗೆ ರಾಜೀವ್​ ಗಾಂಧಿ ಹೌಸಿಂಗ್ ಕಾರ್ಪೋರೇಶನ್​​ನಿಂದ ನಿವೇಶನ ನೀಡಲು ಅರ್ಜಿ ಆಹ್ವಾನಿಸಿದೆ. ಸುಮಾರು 10 ಸಾವಿರ ಜನರು ಅರ್ಜಿ ಹಾಕಿದ್ದು, ಅದನ್ನು ಪರಿಷ್ಕರಿಸಿ 6 ಸಾವಿರ ಅರ್ಜಿಗಳಿಗೆ ಮಾನ್ಯತೆ ನೀಡಿದೆ. ನಗರದ ಹೊರವಲಯದ ಅಲ್ ಅಮೀನ್ ಕಾಲೇಜ್ ಹಿಂಭಾಗದ ಪಾಲಿಕೆಯ 31 ಎಕರೆ ಪ್ರದೇಶದಲ್ಲಿ‌ 3750 ಮನೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ದೊರೆತಿದೆ.

ಇನ್ನು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮುಂಡರಗಿ ಲೇಔಟ್​​​ನಲ್ಲಿ ಸುಸಜ್ಜಿತ ಮಹಾತ್ಮ ಗಾಂಧೀಜಿ ಲೇಔಟ್ ತಲೆ ಎತ್ತಲಿದ್ದು, ಇನ್ನೊಂದು ವರ್ಷದಲ್ಲಿ ಬಡ ಕೂಲಿ ಕಾರ್ಮಿಕರು ಮತ್ತು ನಿವೇಶನ ರಹಿತರಿಗೆ ಈ ಮನೆಗಳು ಹಸ್ತಾಂತರಿಸಲು ಮಹಾನಗರ ಪಾಲಿಕೆಯು ನಿರ್ಧರಿಸಿದೆ. ಜಿ-2 ವಿನ್ಯಾಸದಡಿ ಮಹಾತ್ಮ ಗಾಂಧೀಜಿಯವರ ಹೆಸರಿನಡಿ ಮುಂಡರಗಿ ಪ್ರದೇಶದಲ್ಲಿ ಈ ಸುಸಜ್ಜಿತ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಅಂದಾಜು 5,200 ಮನೆಗಳು ಈ ಪ್ರದೇಶದಲ್ಲಿ ನಿರ್ಮಾಣ ಆಗುತ್ತಿದ್ದು, ಈಗಾಗಲೇ ವಂತಿಗೆ ಪಾವತಿಸದೆ ಇರುವವರಿಗೆ ಈ ಮನೆಗಳ ಹಂಚಿಕೆ ಮಾಡಲಾಗುವುದಿಲ್ಲ. ಸಕಾಲದಲ್ಲಿ ವಂತಿಗೆ ಪಾವತಿಸುವ ಅರ್ಹ ಫಲಾನುಭವಿಗಳಿಗೆ ಈ ಸುಸಜ್ಜಿತ ಮನೆಗಳ ಹಂಚಿಕೆ ಮಾಡೋ ಕಾರ್ಯ‌ವನ್ನು ಮಾಡಲಾಗುತ್ತದೆ.‌‌

ಮೂಲಭೂತ ಸೌಲಭ್ಯ ಇಲ್ಲದ ನಿರಾಶ್ರಿತ ಬಡಾವಣೆಗಳು

ಮೈಸೂರು ಮಹಾನಗರ ಪಾಲಿಕೆ ವಿವಿಧ ಸರ್ಕಾರಿ ಆಶ್ರಯ ಯೋಜನೆಗಳ ಮೂಲಕ ಬಡವರಿಗೆ, ಹಿಂದುಳಿದವರಿಗೆ ಮನೆ ನಿರ್ಮಿಸಿಕೊಟ್ಟಿದೆ. ಕಳೆದ 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ನರ್ಮ್ ಯೋಜನೆಯ ಮೂಲಕ ಸುಮಾರು ₹230 ಕೋಟಿ ವೆಚ್ಚದಲ್ಲಿ 10 ಸಾವಿರ ಗುಂಪು ಮನೆಗಳನ್ನು ನಿರ್ಮಿಸಿತ್ತು. ಜೊತೆಗೆ ಸ್ಥಳೀಯ ಶಾಸಕರ ಅನುದಾನದಿಂದಲೂ ಸಹ ಪಾಲಿಕೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಿ ಕೊಟ್ಟಿದೆ.

ಇನ್ನು ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ನೂರಾರು ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಕೆಲವೆಡೆ ಆ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಈ ಕುರಿತು ಸರ್ಕಾರ ಸ್ಪಂದಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.