ಬೆಂಗಳೂರು: ಶಾಂತಿನಗರದ ಕಾಂಗ್ರೆಸ್ ಶಾಸಕ ಎಸ್.ಎ.ಹ್ಯಾರಿಸ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನಡೆದ ಲಘು ಸ್ಪೋಟ ಪ್ರಕರಣದ ತನಿಖೆಯನ್ನ ವಿವೇಕನಗರ ಪೊಲೀಸರು ಚುರುಕುಗೊಳಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಸ್ಫೋಟಗೊಂಡಿದ್ದು ಪಟಾಕಿ ಎಂದು ತಿಳಿದುಬಂದಿದೆ. ಲಘು ಸ್ಪೋಟಗೊಂಡಿದ್ದ ಪಟಾಕಿಗಳನ್ನ ಪೊಲೀಸರು ಹಾಗೂ ತಜ್ಞರ ತಂಡ, ಶ್ವಾನತಂಡ ಪರಿಶೀಲನೆ ನಡೆಸಿದೆ. ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿದ್ದು,ಉದ್ದೇಶ ಪೂರ್ವಕವಾಗಿ ಹ್ಯಾರಿಸ್ ಅವರನ್ನ ಟಾರ್ಗೆಟ್ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಶಾಸಕ ಹ್ಯಾರಿಸ್, ಚೆಂಡಿನ ಮಾದರಿಯ ಸ್ಪೋಟಕ ವಸ್ತು ಸಿಡಿದಿದ್ದು, ಇದನ್ನ ಯಾರೋ ಬೇಕಂತಲೇ ಮಾಡಿದ್ದಾರೆ ಎಂದು ನಿನ್ನೆ ಹೇಳಿದ್ದರು. ಹೀಗಾಗಿ ಪೊಲೀಸರು ಸ್ಥಳದಲ್ಲಿ ಸಿಕ್ಕ ಪಟಾಕಿ ಹಾಗೂ ಸಿಲ್ವರ್ ಬಣ್ಣದ ಗುಂಡುಗಳನ್ನ ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ ನಂತರವೇ ಅದು ನಿಜವಾದ ಪಟಾಕಿಯೋ ಅಥವಾ ಬಾಂಬೋ ಎನ್ನುವುದು ಗೊತ್ತಾಗಲಿದೆ.