ETV Bharat / city

ಶೀಘ್ರದಲ್ಲೇ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ: ಸಿಎಂ ಬೊಮ್ಮಾಯಿ - 2022ನೇ ಶೈಕ್ಷಣಿಕ ವರ್ಷ

ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗುದ್ದು ಮಕ್ಕಳಿಗೆ ಸಿಎಂ ಬೊಮ್ಮಾಯಿ ಶುಭಕೋರಿದ್ದಾರೆ.

vm
cm
author img

By

Published : May 16, 2022, 10:18 AM IST

Updated : May 16, 2022, 1:46 PM IST

ಬೆಂಗಳೂರು: ಇಂದಿನಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದು, ಶಾಲೆಗಳಿಗೆ ಆಗಮಿಸಲಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಶುಭ ಕೋರಿದ್ದಾರೆ. ಶೀಘ್ರದಲ್ಲಿ ಪಠ್ಯಪುಸ್ತಕ, ಸಮವಸ್ತ್ರದ ಜೊತೆ ಸೈಕಲ್ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಆರ್.ಟಿ.ನಗರದಲ್ಲಿನ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳ ನಂತರ ಶಾಲೆ ಆರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮಕ್ಕಳಿಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಲಿ ಎನ್ನುವ ಆಶಯ ನಮ್ಮದು. ಶಾಲೆಯಲ್ಲಿಯೇ ಕಲಿತಾಗ ಮಕ್ಕಳಿಗೆ ಒಳ್ಳೆಯ ಪರಿಣಾಮ ಆಗುತ್ತದೆ ಎಂದರು.

ಬಿಸಿಯೂಟ ಆರಂಭ: ಕೋವಿಡ್ ಕಾರಣಕ್ಕೆ ಇಷ್ಟು ದಿನ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯಲ್ಲಿ ಕಡಿವಾಣ ಹಾಕಿ ದವಸ, ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ‌ಆದರೆ, ಇಂದಿನಿಂದ ಬಿಸಿಯೂಟವನ್ನು ಆರಂಭಿಸಲು ತಿಳಿಸಲಾಗಿದೆ. ಹಾಗೆಯೇ ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನೂ ಆಹ್ವಾನಿಸಲು ತಿಳಿಸಿದ್ದು, ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮ ಕೂಡ ಶುರುವಾಗಿದೆ.

ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ

Last Updated : May 16, 2022, 1:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.