ETV Bharat / city

ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಆರ್​ಟಿಒ ಅಧಿಕಾರಿಗಳು

ಸಾರಿಗೆ ನೌಕರರ ಮುಷ್ಕರ ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಮತ್ತೊಮ್ಮೆ ಹೆಚ್ಚಿನ ದರ ಪಡೆದರೆ ಬಸ್ ಸೀಜ್ ಮಾಡುವುದಾಗಿ ಆರ್​ಟಿಒ ಅಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

RTO officials warns to private buses owners
ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಆರ್​ಟಿಒ ಅಧಿಕಾರಿಗಳು
author img

By

Published : Apr 15, 2021, 2:43 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಆರ್​ಟಿಒ ಅಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಆರ್​ಟಿಒ ಅಧಿಕಾರಿಗಳು

ಸಾರಿಗೆ ನೌಕರರ ಮುಷ್ಕರ ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 8 ದಿನಗಳಿಂದಲೂ‌ ಬಸ್ ‌ಪ್ರಯಾಣವನ್ನೇ ನಂಬಿಕೊಂಡಿದ್ದ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಸರ್ಕಾರ ಖಾಸಗಿ ಬಸ್‌ಗಳ ಮೊರೆ ಹೋಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬಸ್​ನವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು.

ಹೀಗಾಗಿ, ಇಂದು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆರ್​ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮೆಜೆಸ್ಟಿಕ್​ನಿಂದ ಬೊಮ್ಮನಹಳ್ಳಿಗೆ ಹೋಗಲು ಖಾಸಗಿ ಬಸ್‌ನ ಕಂಡಕ್ಟರ್ 100 ರೂಪಾಯಿ ಕೇಳಿದ್ದ. ಹೀಗಾಗಿ, ಬಸ್ ತಡೆದು ಸರ್ಕಾರ ನಿಗದಿ ಮಾಡಿದ್ದ ದರದ ಪಟ್ಟಿಯನ್ನ‌ ಕಂಡಕ್ಟರ್​ಗೆ ನೀಡಿ, ಮತ್ತೊಮ್ಮೆ ಹೆಚ್ಚಿನ ದರ ಪಡೆದರೆ ಬಸ್ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಓದಿ: ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ವಾರ್ಡ್​ ಬಾಯ್​: ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.