ಬೆಂಗಳೂರು: ಮನೆ ಬಾಡಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಆದಿತ್ಯ ಹಾಗೂ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪೊಲೀಸ್ ಎದುರು ಹಾಜರಾಗಿದ್ದಾರೆ. ಇಂದು ಸದಾಶಿವನಗರ ಠಾಣೆಗೆ ಆಗಮಿಸಿ ತನಿಖಾಧಾಕಾರಿ ಎದುರು ವಿಚಾರಣೆಗೊಳಪಟ್ಟಿದ್ದಾರೆ.
ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ನಟ ಆದಿತ್ಯಾ ಕುಟುಂಬದ ವಿರುದ್ಧ ಮನೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. 7 ತಿಂಗಳಿನಿಂದ 2.88 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದಾರೆ. ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನೆಡೆಸಿದ್ದಾರೆ ಅಂತಾ ಮನೆ ಮಾಲೀಕ ಪ್ರಸನ್ನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.