ಬೆಂಗಳೂರು : ಚಂದ್ರು ಕೊಲೆ ವಿಚಾರದಲ್ಲಿ ಗೃಹ ಸಚಿವರು ಹೇಳಿರುವುದು ಸತ್ಯ. ಉರ್ದು ಬರಲ್ಲ ಎಂದು ಹೇಳಿದಾಗ ಚುಚ್ಚಲಾಗಿದೆ. ಇದರ ಬಗ್ಗೆ ತನಿಖೆಯಾಗಲಿ. ಪ್ರತ್ಯಕ್ಷದರ್ಶಿ ಚಂದ್ರು ಸ್ನೇಹಿತ ಸೈಮನ್ ಹೇಳಿರುವುದು ಸತ್ಯ. ಆ ಜಾಗದಲ್ಲಿ ಸ್ಥಳೀಯರಿದ್ದರು, ಸೈಮನ್ ಅಲ್ಲೇ ಇದ್ದವನು, ಚುಚ್ಚಿರುವುದನ್ನು ನೋಡಿದ್ದಾನೆ. ಅವರ ತಾಯಿ, ಚಿಕ್ಕಮ್ಮ, ಸೈಯದ್ ಎಲ್ಲಾ ನಿಜ ಹೇಳಿದ್ದಾರೆ. ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಂಮರು. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಚಂದ್ರುವಿನ ಸ್ನೇಹಿತ ಹೇಳಿದ್ದಾನೆ. ಬೈಕ್ಗೆ ಆ್ಯಕ್ಸಿಂಡೆಂಟ್ ಆಗಿದ್ದು ನಿಜ. ಆಗ ಉರ್ದುವಿನಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಉರ್ದು ನಹೀ ಆತಾ ಹೇ ಅಂತಾ ಹೇಳಿದಾಗ ಚುಚ್ಚಿ ಚ್ಚುಚಿ ಕೊಲೆ ಮಾಡಿದ್ದಾರೆ. ಚಂದ್ರು ರಕ್ತಸ್ರಾವದಿಂದ ಸಾವನ್ನಾಪಿದ್ದಾರೆ ಎಂದರು.
ಹಿಂದಿ ಭಾಷೆ ಹೇರಿಕೆ ವಿಚಾರವಾಗಿ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಕನ್ನಡಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಪ್ರಾದೇಶಿಕ ಭಾಷೆಗೆ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ದೇಶವನ್ನು ಸುತ್ತಿದ್ದಾರೆ. ಕೋಟ್ಯಂತರ ಜನ ಯಾವ ಭಾಷೆ ಮಾತನಾಡುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಮೊದಲು. ತಮಿಳುನಾಡಿನಲ್ಲಿ ತಮಿಳು ಮೊದಲು. ದೇಶದ ವಿಚಾರ ಬಂದಾಗ ರಾಷ್ಟ್ರೀಯ ಭಾಷೆ ಹಿಂದಿ ಮೊದಲು. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಮುಸ್ಲಿಂ ಆಟೋಗಳನ್ನು ಬಳಸಬೇಡಿ ಎಂದು ಹಿಂದೂ ರಕ್ಷಣಾ ವೇದಿಕೆ ಅಭಿಯಾನ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದು ಕ್ಷುಲ್ಲಕ ಕಾರಣ. ಆಟೋ ಬಳಸಬಾರದು, ಮಾವಿನ ಹಣ್ಣು ಖರೀದಿ ಮಾಡಬಾರದು ಎನ್ನುವ ವಿಚಾರಗಳನ್ನು ಇಲ್ಲಿ ತರಬಾರದು. ಇದರಲ್ಲಿ ಹಿಂದೂ-ಮುಸ್ಲಿಂ ಎಂದು ಬೇಧ ಮಾಡಬಾರದು. ಯಾವ ಆಟೋ ಮೊದಲು ಬರುತ್ತೋ ಆ ಆಟೋವನ್ನ ಜನರು ಬಳಸುತ್ತಾರೆ. ಈ ತರಹದ ವಿಚಾರಗಳನ್ನು ಬಿಜೆಪಿ ಬೆಂಬಲಿಸಲ್ಲ ಎಂದು ಸ್ಪಷ್ಟಪಡಿಸಿದರು.
ಅರ್ಚಕರು ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇವಾಲಯಗಳಲ್ಲಿ ಸ್ವಾರ್ಥ ಬಿಟ್ಟು ಕೆಲಸ ಮಾಡುವುದು ಅರ್ಚಕರು. ದೇವಾಲಯದ ಸ್ವಚ್ಛತೆ, ಪೂಜೆ, ವಿಧಿ-ವಿಧಾನಗಳನ್ನ ಮಾಡುವುದು ಅರ್ಚಕರು. ಕುಮಾರಸ್ವಾಮಿಯವರ ಈ ಹೇಳಿಕೆ ಸರಿಯಲ್ಲ. ಈ ಹೇಳಿಕೆಯನ್ನು ಅವರು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಶಿವಮೊಗ್ಗ: ಯುವಕನ ಮೇಲೆ ಹಲ್ಲೆ ಪ್ರಕರಣ, ಐವರ ಬಂಧನ