ETV Bharat / city

ಸಿಡಿ ಲೇಡಿಗೆ 8ನೇ ಬಾರಿ ನೋಟಿಸ್​: ನಾಳೆ ವಿಚಾರಣೆಗೆ ಹಾಜರಾಗಲು ಎಸ್​​ಐಟಿ ಸೂಚನೆ

ಸಿಡಿ ಪ್ರಕರಣ ಕುರಿತು ಅಗತ್ಯ ತನಿಖೆ ಕೈಗೊಳ್ಳಬೇಕಿರುವುದರಿಂದ ಎಸ್​​ಐಟಿ ತಂಡ ಯುವತಿಗೆ ಮತ್ತೊಮ್ಮೆ ನೋಟಿಸ್​​ ಜಾರಿಮಾಡಿದೆ. ಅಪರಾಧ ನಡೆದ ಸ್ಥಳ ಗುರುತಿಸುವಿಕೆ, ಪಂಚನಾಮೆ ಸಂದರ್ಭದಲ್ಲಿ ಖುದ್ದು ಹಾಜರಾಗಬೇಕಿರುವ ಅಗತ್ಯವಿರುವುದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ಜಾರಿ ಮಾಡಲಾಗಿದೆ.

ramesh-jarakiholi-cd-case-sit-notice-to-victim
ರಾಸಲೀಲೆ ಸಿಡಿ ಪ್ರಕರಣ
author img

By

Published : Mar 29, 2021, 8:00 PM IST

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು ನಾಳೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಎಸ್ಐಟಿ ಅಧಿಕಾರಿಗಳು ಮತ್ತೆ ನೋಟಿಸ್​ ಜಾರಿ ಮಾಡಿದ್ದಾರೆ.

ಯುವತಿ ಪರ ವಕೀಲ ಜಗದೀಶ್ ಮುಖಾಂತರ ಮೂರನೇ ಬಾರಿ ಹಾಗು ಎಸ್ಐಟಿ ಐದು ಬಾರಿ ನೋಟಿಸ್ ಜಾರಿ ಮಾಡಿತ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಯುವತಿಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು

ಯುವತಿ ವೈದ್ಯಕೀಯ ಪರೀಕ್ಷೆಗಾಗಿ ಹಾಜರಾಗಬೇಕಿದೆ. ಕೃತ್ಯ ನಡೆದ ಸ್ಥಳದ ಬಗ್ಗೆ ಮಹಜರು ಮಾಡಬೇಕಿದೆ. ತನಿಖಾಧಿಕಾರಿ ಮುಂದೆ ಹಾಜರಾಗಿ 161ರಡಿಯಲ್ಲಿ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ 164ರಡಿಯಲ್ಲಿ ಹೇಳಿಕೆ ನೀಡಬೇಕಿದೆ. ಅಪರಾಧ ನಡೆದ ಸ್ಥಳ ಗುರುತಿಸುವಿಕೆ, ಪಂಚನಾಮೆ ಸಂದರ್ಭದಲ್ಲಿ ಖುದ್ದು ಹಾಜರಾಗಬೇಕಿರುವ ಅಗತ್ಯವಿರುವುದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದೆ.

ಯುವತಿ ಇದ್ದ ಸ್ಥಳಕ್ಕೆ ತರಳಿ ಹೇಳಿ ದಾಖಲು ಸಾಧ್ಯತೆ

ಪ್ರತ್ಯೇಕ ಸ್ಥಳದಲ್ಲಿ ಹೇಳಿಕೆ ನೀಡಲು ಇಚ್ಛಿಸಿದರೆ ತೆರಳಲು ಸಿದ್ಧ. ನೋಟಿಸ್​ ತಲುಪಿದ ತಕ್ಷಣ ಸ್ಥಳ, ಸಮಯದ ಮಾಹಿತಿ ನೀಡುವುದು ಹಾಗೂ ಸೂಚಿಸಿದ ಸ್ಥಳಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ತೆರಳಿ ಯುವತಿಯ ಹೇಳಿಕೆ‌ ದಾಖಲಿಸಿಕೊಳ್ಳಲಿದ್ದಾರೆ.

ಯುವತಿಯ ಭದ್ರತೆಗೆ 8 ಜನ ಪೊಲೀಸರ ತಂಡ ಸಿದ್ಧ

ಜೀವ ಬೆದರಿಕೆ ಹಿನ್ನೆಲೆ ಯುವತಿಯ ಭದ್ರತೆಗೆ 8 ಜನ ಪೊಲೀಸರ ತಂಡ ಸಿದ್ಧವಾಗಿದೆ. ಎಸ್ಐಟಿಯಿಂದ ಮಹಿಳಾ ಪೊಲೀಸ್ ಸಿಬ್ಬಂದಿ ತಂಡ ರಚನೆ ಮಾಡಲಾಗಿದೆ. ‌ತಂಡದಲ್ಲಿ ಓರ್ವ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 8 ಮಂದಿ‌‌ ಪೊಲೀಸರಿದ್ದಾರೆ. ಒಂದು ವೇಳೆ ಯುವತಿ ಹೇಳಿದ್ದಲ್ಲಿಗೆ ತೆರಳಿ ಭದ್ರತೆ ನೀಡಲು, ಹೇಳಿಕೆ ದಾಖಲಿಸಿಕೊಳ್ಳಲು ಅಥವಾ ಆಕೆಯೇ ನೇರವಾಗಿ ಹಾಜರಾದರೂ ಭದ್ರತೆ ನೀಡಲಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.