ETV Bharat / city

ರಾಜ್ಯದಲ್ಲಿ ಕೊರೊನಾ ತಾಂಡವ.. ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ರೂಪ್ಸಾ ಪ್ರಶ್ನೆ ಏನು? - ಮೇ 24 ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ

ಇದೇ ತಿಂಗಳ 24 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಾಗಿ ಪಿಯು ಬೋರ್ಡ್ ಘೋಷಣೆ ಮಾಡಿದೆ. ಆದ್ರೆ ರಾಜ್ಯದಲ್ಲಿ ಕೋವಿಡ್​ ಆರ್ಭಟ ಹೆಚ್ಚಿದ್ದು, ಪರೀಕ್ಷೆ ನಡೆಯುತ್ತಾ? ಇಲ್ವಾ? ಒಂದೊಮ್ಮೆ ಪರೀಕ್ಷೆ ನಡೆದರೂ ಹೇಗೆ ನಡೆಯಲಿದೆ ಅನ್ನೋ ಪ್ರಶ್ನೆ ರೂಪ್ಸಾ ಸಂಘಟನೆಯದ್ದಾಗಿದೆ.

pu exam
pu exam
author img

By

Published : May 2, 2021, 4:49 PM IST

Updated : May 2, 2021, 8:26 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಮೇ ತಿಂಗಳಲ್ಲಿ ಇದರ ತೀವ್ರತೆ ಹೆಚ್ಚಾಗಿ ಇರಲಿದೆ ಅಂತ ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಿತ್ಯ 40 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

‌ಈ ನಡುವೆ ಇದೇ ತಿಂಗಳ 24 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ದಿನಾಂಕವನ್ನ ಪಿಯು ಬೋರ್ಡ್ ಘೋಷಣೆ ಮಾಡಿದೆ. ಹೀಗಾಗಿ, ಪರೀಕ್ಷೆ ನಡೆಯುತ್ತಾ ನಡೆಯೋದಿಲ್ವಾ? ಒಂದೊಮ್ಮೆ ಪರೀಕ್ಷೆ ನಡೆದರೂ ಹೇಗೆ ನಡೆಯಲಿದೆ ಅನ್ನೋ ಪ್ರಶ್ನೆ ಎದುರಾಗಿದೆ. ಈಗಾಗಲೇ ಸೋಂಕು ಹೆಚ್ಚಾದ ಕಾರಣಕ್ಕೆ ದ್ವಿತೀಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಿರುವಾಗ ಮೇ 24ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕುರಿತು ಮಾಹಿತಿ ನೀಡಿ ಅಂತ ರೂಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ರೂಪ್ಸಾ ಪ್ರಶ್ನೆ ಏನು

ಒಂದು ಕಡೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿಯನ್ನ ನಡೆಸುತ್ತಿದ್ದಾರೆ.‌ ಇನ್ನೊಂದು ಕಡೆ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲರಲ್ಲೂ ಆತಂಕ ಮನೆಮಾಡಿದೆ. ಮೇ 24ರಂದು ಪರೀಕ್ಷೆ ನಡೆಯುತ್ತಾ, ನಡೆಯೋಲ್ವಾ ಎಂಬ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ, ಇಲಾಖೆಯೊಂದಿಗೆ ವೈಜ್ಞಾನಿಕ ಚಿಂತನೆ ನಡೆಸಿ ಪರೀಕ್ಷೆ ನಡೆಸುವುದಾದರೆ ಹೇಗೆ? ಯಾವ ರೀತಿಯಲ್ಲಿ ನಡೆಸಲಾಗುತ್ತೆ ಅಂತ ಸ್ಪಷ್ಟ ನಿಲುವು ತಿಳಿಸುವಂತೆ ಮನವಿ ಮಾಡಿದ್ದಾರೆ.

ಶಿಕ್ಷಣ ಇಲಾಖೆಯು ಈ ಬಗ್ಗೆ ಇಲ್ಲಿಯ ತನಕ ಯಾವುದೇ ಮಾಹಿತಿಯನ್ನ ನೀಡಿಲ್ಲ. ಕೊನೇ ಕ್ಷಣದಲ್ಲಿ ಯಾರದ್ದೋ ಒತ್ತಡಕ್ಕೆ ಮಣಿದು ಪರೀಕ್ಷೆಯನ್ನ ಮುಂದೂಡುತ್ತೆ. ಕಾಲೇಜಿನವ್ರನ್ನ ಸಂಪರ್ಕಿಸಿ ಮಾತುಕತೆಯನ್ನೂ ನಡೆಸಿಲ್ಲ ಅಂತ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಕಾರಣಕ್ಕೆ ಆನ್​ಲೈನ್​ನಲ್ಲೇ ಪರೀಕ್ಷೆ ನಡೆಯುತ್ತೋ, ಅಥವಾ ಪರೀಕ್ಷಾ ದಿನಾಂಕವನ್ನ ಮುಂದೂಡಲಾಗುತ್ತೋ ಎಂಬುದರ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗಿದೆ. ಹೀಗಾಗಿ, ತಡವಾಗಿ ನಿರ್ಧಾರ ಕೈಗೊಳ್ಳದೇ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿಸದಿರಿ ಎಂದರು.

Last Updated : May 2, 2021, 8:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.