ETV Bharat / city

ನೂರಡಿ ಆಳದ ಪಾಳು ಬಿದ್ದ ಬಾವಿಯಿಂದ ವಿದೇಶಿ ಪಕ್ಷಿಯ ರಕ್ಷಣೆ

ಸ್ಕೌಟ್ಸ್ ಮತ್ತು ಗೈಡ್ಸ್​ನ ಪಕ್ಷಿ ಪ್ರೇಮಿಯೊಬ್ಬರು ಪಾಳುಬಿದ್ದ ಬಾವಿಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿದ್ದ ವಿದೇಶಿ ಪಕ್ಷಿಯೊಂದನ್ನು ರಕ್ಷಣೆ ಮಾಡಿದ್ದಾರೆ.

foreign bird
ವಿದೇಶಿ ಪಕ್ಷಿ
author img

By

Published : Jan 3, 2020, 10:05 AM IST

ದೊಡ್ಡಬಳ್ಳಾಪುರ : ಸ್ಕೌಟ್ಸ್ ಮತ್ತು ಗೈಡ್ಸ್​ನ ಪಕ್ಷಿ ಪ್ರೇಮಿಯೊಬ್ಬರು ನೂರಡಿ ಆಳದ ಪಾಳು ಬಿದ್ದ ಬಾವಿಯಲ್ಲಿ ಕಾಣಿಸಿಕೊಂಡ ವಿದೇಶಿ ಪಕ್ಷಿಯನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಪೋಷಣೆ ಮಾಡುತ್ತಿದ್ದಾರೆ.

ವಿದೇಶಿ ಪಕ್ಷಿ ರಕ್ಷಣೆ ಮಾಡಿದ ಡಾ. ಅಜಯ್ ಕುಮಾರ್ ಜೈನ್

ದೊಡ್ಡಬಳ್ಳಾಪುರ ನಗರದ ಹೊರವಲಯದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್​ನ ಜಾಂಬೋರೇಟ್ ಶಿಬಿರ ನಡೆಯುತ್ತಿದೆ. ಇದರ ಅಂಗವಾಗಿ ಪಾಳುಬಿದ್ದ ಬಾವಿಯನ್ನು ವಿದ್ಯಾರ್ಥಿಗಳು ಸ್ವಚ್ಛ ಮಾಡುತ್ತಿದ್ದರು. ಈ ಸಮಯದಲ್ಲಿ ಬಾವಿಯ ಸಂದಿಯಲ್ಲಿ ಪಕ್ಷಿಯೊಂದು ವಿದ್ಯಾರ್ಥಿಗಳ ಕಣ್ಣಿಗೆ ಬಿದ್ದಿದೆ. ತಕ್ಷಣವೇ ವಿದ್ಯಾರ್ಥಿಗಳು ಈ ವಿಚಾರವನ್ನು ಶಿಬಿರದಲ್ಲಿ ಭಾಗವಹಿಸಿದ್ದ ಪಕ್ಷಿ ಪ್ರೇಮಿ ಡಾ. ಅಜಯ್ ಕುಮಾರ್ ಜೈನ್ ಅವರ ಗಮನಕ್ಕೆ ತಂದಿದ್ದಾರೆ.

ಈ ಪಕ್ಷಿಯನ್ನು ಪರೀಕ್ಷಿಸಿದ ಡಾ. ಅಜಯ್ ಕುಮಾರ್ ಜೈನ್ ಇದು ಆಸ್ಟ್ರೇಲಿಯಾದ ಐಬಿಸ್ ಪಕ್ಷಿಯಾಗಿದ್ದು, ಕೊಕ್ಕರೆ ಜಾತಿಗೆ ಸೇರಿದೆ. ಸುಮಾರು 2 ಸಾವಿರ ಕಿ.ಮೀ ಗಳಿಂದ ದಕ್ಷಿಣ ಭಾರತದ ಕಡೆ ವಲಸೆ ಬರುತ್ತೆ. ಕೆರೆ ಮತ್ತು ನದಿಗಳಲ್ಲಿ ಅಶ್ರಯ ಪಡೆದು ಸಂತಾನೋತ್ಪತ್ತಿ ಮಾಡ್ಕೊಂಡು ಆಸ್ಟ್ರೇಲಿಯಾ ದೇಶಕ್ಕೆ ಮರಳುತ್ತೆ. ಈಗ ನಮಗೆ ಸಿಕ್ಕಿರುವುದು ಎರಡು ದಿನದ ಮರಿಯಾಗಿದ್ದರಿಂದ ಅದು ಕಣ್ಣು ಸಹ ಬಿಟ್ಟಿರಲಿಲ್ಲ. ಈ ಪಕ್ಷಿ ಕಣ್ಣು ಬಿಟ್ಟು ಓಡಾಡಲು 15 ದಿನ ಬೇಕಾಗುತ್ತೆ. ಆ ಕಾರಣದಿಂದ ತಮ್ಮ ಆಸ್ಪತ್ರೆಯಲ್ಲಿನ ವೆಂಟಿಲೇಟರ್​ನಲ್ಲಿಟ್ಟು ಪೋಷಣೆ ಮಾಡಿ ದೊಡ್ಡದಾದ ನಂತರ ಕೆರೆಯ ಬಳಿ ಬಿಡುವುದಾಗಿ ಅವರು ತಿಳಿಸಿದರು.

ಡಾ. ಅಜಯ್ ಕುಮಾರ್ ಜೈನ್ ಅವರು ಮೈಸೂರಿನಲ್ಲಿ ಪ್ರಗತಿ ಬರ್ಡ್ ಚಾರಿಟಬಲ್ ಟ್ರಸ್ಟ್ ಮೂಲಕ ಇಲ್ಲಿಯವರೆಗೂ 1,600 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಣೆ ಮಾಡಿದ್ದಾರೆ.

Intro:ನೂರಾಡಿಯ ಪಾಳು ಬಿದ್ದ ಬಾವಿಯಲ್ಲಿನ ವಿದೇಶಿ ಪಕ್ಷಿಯ ರಕ್ಷಣೆ

Body:ದೊಡ್ಡಬಳ್ಳಾಪುರ : ಸ್ಕೌಟ್ಸ್ ಮತ್ತು ಗೈಡ್ಸ್ ನಾ ಪಕ್ಷಿ ಪ್ರೇಮಿಯೊಬ್ಬರು ನೂರಾಡಿಯ ಪಾಳು ಬಿದ್ದ ಬಾವಿಯಲ್ಲಿ ಬಿದ್ದ ಎರಡು ದಿನದ ವಿದೇಶಿ ಪಕ್ಷಿಯ ರಕ್ಷಣೆ ಮಾಡಿ ಆಸ್ಪತ್ರೆಯಲ್ಲಿ ಪೋಷಣೆ ಮಾಡುತ್ತಿದ್ದಾರೆ.

ದೊಡ್ಡಬಳ್ಳಾಪುರ ನಗರದ ಹೊರವಲಯದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಾಂಬೋರೇಟ್ ಶಿಬಿರ ನಡೆಯುತ್ತಿದ್ದು ಅದರ ಅಂಗವಾಗಿ ಕೇಂದ್ರದ ಅವರಣದಲ್ಲಿನ ಪಾಳುಬಿದ್ದ ಬಾವಿಯನ್ನು ವಿದ್ಯಾರ್ಥಿಗಳು ಸ್ವಚ್ಛ ಮಾಡುವ ಸಮಯದಲ್ಲಿ ಬಾವಿಯ ಸಂದಿಯಲ್ಲಿ ಎರಡು ದಿನದ ಪಕ್ಷಿಯೊಂದು ವಿದ್ಯಾರ್ಥಿಗಳ ಕಣ್ಣಿಗೆ ಬಿದ್ದಿದೆ. ತಕ್ಷಣವೇ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದ ಪಕ್ಷಿ ಪ್ರೇಮಿ ಡಾ. ಅಜಯ್ ಕುಮಾರ್ ಜೈನ್ ರವರ ಗಮನಕ್ಕೆ ತಂದಿದ್ದಾರೆ. ಅಂದಹಾಗೇ ಇವರು ಮೈಸೂರಿನಲ್ಲಿ ಪ್ರಗತಿ ಬರ್ಡ್ ಚಾರಿಟಬಲ್ ಟ್ರಸ್ಟ್ ಮೂಲಕ ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಬರ್ಡ್ ಗಳನ್ನ ರಕ್ಷಣೆ ಮಾಡಿ ದ್ದಾರೆ.

ಪಕ್ಷಿಯನ್ನ ಪರೀಕ್ಷಿಸಿದ ಡಾ. ಅಜಯ್ ಕುಮಾರ್ ಜೈನ್ ಇದು ಆಸ್ಟ್ರೇಲಿಯದ
ಐಬಿಸ್ ಪಕ್ಷಿ. ಕೊಕ್ಕರೆ ಜಾತಿಗೆ ಸೇರಿದ ವಲಸೆ ಹಕ್ಕಿ. ಸುಮಾರು 2 ಸಾವಿರ ಕಿ.ಮೀ ಗಳಿಂದ ದಕ್ಷಿಣ ಭಾರತದ ಕಡೇ ವಲಸೆ ಬರುತ್ತೆ. ಕೆರೆ ಮತ್ತು ನದಿಗಳಲ್ಲಿ ಅಶ್ರಯ ಪಡೆದು ವಂಶೋತ್ಪತ್ತಿ ಮಾಡ್ಕೊಂಡು ಆಸ್ಟ್ರೇಲಿಯ ದೇಶಕ್ಕೆ ಮರಳುತ್ತೆ. ಎರಡು ದಿನದ ಮರಿಯಾಗಿದ್ದರಿಂದ ಅದು ಕಣ್ಣು ಸಹ ಬಿಟ್ಟಿರಲಿಲ್ಲ. 15 ದಿನ ಬೇಕಾಗುತ್ತಂತೆ ಕಣ್ಣು ಬಿಟ್ಟು ಓಡಾಡಲು. ಆ ಕಾರಣದಿಂದ ಐಬಿಸ್ ಪಕ್ಷಿಯನ್ನ ತೆಗೆದು ಕೊಂಡ ಡಾ. ಅಜಯ್ ಕುಮಾರ್ ಜೈನ್ ತಮ್ಮ ಆಸ್ಪತ್ರೆಯಲ್ಲಿನ ವೆಟಿಲೇಟಲ್ ನಲ್ಲಿ ಇಟ್ಟು ಪೋಷಣೆ ಮಾಡಿ ದೊಡ್ಡದಾದ ನಂತರ ಕೆರೆಯ ಬಳಿ ಬಿಡುವುದ್ದಾಗಿ ಹೇಳಿದರು.

ಬೈಟ್ : ಡಾ. ಅಜಯ್ ಕುಮಾರ್ ಜೈನ್ , ಪಕ್ಷಿ ಪ್ರೇಮಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.