ETV Bharat / city

ಬಸವಣ್ಣರ ನಾಡಲ್ಲಿ ದಲಿತರೊಬ್ಬರು ಸಿಎಂ ಆಗದಿರುವುದು ದುರಂತ: ಸಾಹಿತಿ ಹೆಚ್.ಟಿ ಪೋತೆ

ಬಸವಣ್ಣನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶದಂತೆ ಶಿಕ್ಷಣ, ಸಂಘಟನೆ, ಹೋರಾಟ ತತ್ತ್ವದಡಿಯಲ್ಲಿ ಖರ್ಗೆ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡಲ್ಲಿ ದಲಿತ ಮುಖ್ಯಮಂತ್ರಿಯಾಗಲು ಅವಕಾಶ ನೀಡದೇ ಇರುವುದು ಈ ನಾಡಿನ ಕನಸು ನನಸಾಗಿಲ್ಲ ಎಂದರ್ಥ ಎಂದರು.

prof-ht-pote
ಸಾಹಿತಿ ಹೆಚ್.ಟಿ ಪೋತೆ
author img

By

Published : Jul 22, 2021, 7:46 AM IST

ಬೆಂಗಳೂರು: ಕನ್ನಡನಾಡು ಅಂದ್ರೆ ಬಸವಣ್ಣನ ನಾಡು. ಇಂತಹ ನಾಡಿನಲ್ಲಿ ಈವರೆಗೂ ಒಬ್ಬ ದಲಿತ ಮುಖ್ಯಮಂತ್ರಿ ಆಗಿಲ್ಲ ಎಂದರೆ, ಈ ನಾಡಿನ ಕನಸೇ ನನಸಾಗಿಲ್ಲ ಎಂದರ್ಥ. ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಧಾನಿಯಾಗುವ ಅರ್ಹತೆಯುಳ್ಳವರು, ಆದರೆ ರಾಷ್ಟ್ರೀಯ ಪಕ್ಷ ಹಾಗೂ ಜನ ಮನಸ್ಸು ಮಾಡದ ಹಿನ್ನಲೆ ಸಿಎಂ ಆಗಿಲ್ಲ ಎಂದು ಲೇಖಕ ಪ್ರೊ.ಹೆಚ್.ಟಿ ಪೋತೆ ಅಭಿಪ್ರಾಯಪಟ್ಟಿದ್ದಾರೆ.

ಪ್ರೊ.ಹೆಚ್.ಟಿ ಪೋತೆ ಬರೆದಿರುವ 'ಬಾಬಾಸಾಹೇಬರೆಡೆಗೆ ಪುಸ್ತಕ ಬಿಡುಗಡೆ

ನಗರದ ಗಾಂಧಿ ಭವನದಲ್ಲಿ ಪ್ರೊ.ಹೆಚ್.ಟಿ ಪೋತೆ ಬರೆದಿರುವ 'ಬಾಬಾಸಾಹೇಬರೆಡೆಗೆ' ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಜೀವನಕಥನ ಕೃತಿ ಬಿಡುಗಡೆ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಖರ್ಗೆಯವರು ಅಪರೂಪದ ರಾಜಕಾರಣಿ. ಕಳೆದ 50 ವರ್ಷದಿಂದ ಮೌಲ್ಯಯುತ ರಾಜಕಾರಣ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶದಂತೆ ಶಿಕ್ಷಣ, ಸಂಘಟನೆ, ಹೋರಾಟ ತತ್ತ್ವದಡಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡಲ್ಲಿ ದಲಿತ ಮುಖ್ಯಮಂತ್ರಿಯಾಗಲು ಅವಕಾಶ ನೀಡದೇ ಇರುವುದು ಈ ನಾಡಿನ ಕನಸು ನನಸಾಗಿಲ್ಲ ಎಂದರ್ಥ ಎಂದರು.

ಮುಖ್ಯಮಂತ್ರಿಗೆ 5 ವರ್ಷ ಪೂರ್ಣಗೊಳಿಸಲು ಬಿಡಬೇಕು- ಪ್ರೊ.ಹಂಪ. ನಾಗರಾಜಯ್ಯ

ನಾಡೋಜ, ಡಾ.ಹಂಪ. ನಾಗರಾಜಯ್ಯ ಅವರು ರಾಜ್ಯದ ರಾಜಕೀಯ ನಾಯಕತ್ವ ಬದಲಾವಣೆ ಕುರಿತಂತೆ ಮಾತನಾಡಿ, ಪ್ರಜೆಗಳನ್ನು ಮೂಲೆಗೆ ತಳ್ಳಿ ಕೇವಲ ಅಧಿಕಾರ, ಗದ್ದುಗೆ ಎಂದೆ ಮಾತಾಡ್ತಾ ಇರೋದು ನೋವಾಗುತ್ತದೆ. ಐದು ವರ್ಷ ಆಡಳಿತದಲ್ಲಿರಲು ಅವರಿಗೆ ಮತ ಕೊಟ್ಟು ಜನ ಚುನಾಯಿಸಿದ್ದಾರೆ. ಅವರ ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು. ಇಡೀ ಜಗತ್ತು ಕೊರೊನಾದಿಂದ ಆತಂಕದಲ್ಲಿರುವಾಗ ಧೈರ್ಯ ತುಂಬಬೇಕಾದ ಸರ್ಕಾರ ಆಡಳಿತ, ಅದನ್ನು ಮಾಡದೇ ಗದ್ದುಗೆಗೆ ಕಾಡುತ್ತಿದ್ದಾರೆ. ಇದರಿಂದ ಸಿಎಂ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಕಡೆಗೆ ಯೋಚಿಸಬೇಕಾಗುತ್ತದೆ ಹೊರತು, ಆಡಳಿತಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.