ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳೇ ನೀಡುತ್ತಿವೆ. ಇದೀಗ ಕೋವಿಡ್ ವಿರುದ್ಧ ಅಖಾಡಕ್ಕೆ ಖಾಸಗಿ ಆಸ್ಪತ್ರೆಗಳು ಇಳಿಯಲಿವೆ.
ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗೆ ಸರ್ಕಾರ ದರ ನಿಗದಿ ಮಾಡಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲಿ ದರ ನಿಗದಿ ಮಾಡಿದ್ದು, ಸರ್ಕಾರದ ದರ ನಿಗದಿಗೆ ಐಎಂಎ ಕೂಡ ಅಸ್ತು ಎಂದಿದೆ. ಈ ಬೇಡಿಕೆಯನ್ನೇ ಫಾನಾ( PHANA) ಕೂಡ ಇಟ್ಟಿತ್ತು. ಹೀಗಾಗಿ ಇನ್ಮುಂದೆ ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿದೆ. ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬರಲಿದ್ದು, ಕೋವಿಡ್ ಹೋರಾಟಕ್ಕೆ ಖಾಸಗಿ ಆಸ್ಪತ್ರೆಗಳು ಸಜ್ಜಾಗಬೇಕಿದೆ.
ಕೊರೊನಾ ರೋಗಿಗಳ ಚಿಕಿತ್ಸಾ ವೆಚ್ಚ ಖಾಸಗಿ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಇರಲಿದೆ?
- ಸರ್ಕಾರಿ ಆಸ್ಪತ್ರೆಗಳಿಂದ ಬರುವ ಸ್ವಾಬ್ ಟೆಸ್ಟ್ - 2600 ರೂ.
- ಜನರಲ್ ವಾರ್ಡ್ನಲ್ಲಿ ಕೊರೊನಾ ರೋಗಿಯ ಒಂದು ದಿನದ ಚಿಕಿತ್ಸೆ- 5200 ರೂ.
- ಜನರಲ್ ವಾರ್ಡ್ ವಿತ್ ಆಕ್ಸಿಜನ್ ಒಂದು ದಿನಕ್ಕೆ- 7500 ರೂ.
- ಐಸೋಲೇಷನ್ ವಾರ್ಡ್ ಒಂದು ದಿನಕ್ಕೆ- 8500 ರೂ.
- ಐಸಿಯು ವಿತ್ ವೆಂಟಿಲೇಟರ್- 12,000 ರೂ.
ಸದ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬರಬೇಕಿದ್ದು, ಆದೇಶ ಬಂದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತದೆ. ದರ ನಿಗದಿಯಂತೆ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣ ತೆಗೆದುಕೊಳ್ಳಬೇಕಿದೆ.