ಬೆಂಗಳೂರು: ರಾಜಧಾನಿಯ ಸದಾಶಿವನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದ್ದ ಜಾಲಿ ರೈಡ್ ಪ್ರಕರಣ ಸಂಬಂಧ ಬಳಸಿದ್ದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನ ಮಾಲೀಕನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ರಾತ್ರಿ ವೇಳೆ ಜಾಲಿರೈಡ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಗರದ ಸದಾಶಿವನಗರ ಸಂಚಾರ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದರು.
ಕಾರಿನ ನಂಬರ್ ಮೂಲಕ ಮಾಲೀಕ ಸಂಜಿತ್ ಶೆಟ್ಟಿ ಎನ್ನುವವರನ್ನು ಗುರುತಿಸಿ ಘಟನೆ ಸಂಬಂಧ ಠಾಣೆಗೆ ಹಾಜರಾಗಿ ಉತ್ತರಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಾಲಿ ರೈಡ್ ಸಮಯದಲ್ಲಿ ಕಾರಿನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು. ಯಾರು ಎಷ್ಟು ಮಂದಿ ಇದ್ದರು ಎಂಬ ಮಾಹಿತಿ ಲಭಿಸಿದ್ದು, ಶೀಘ್ರದಲ್ಲಿ ಹೆಸರುಗಳನ್ನು ಪ್ರಕಟಿಸಲಾಗುವುದು. ಈಗಾಗಲೇ ಪ್ರಕರಣದ ಸಂಬಂಧ ವಿಡಿಯೋ ಮತ್ತು ಕೆಲವು ದಾಖಲೆಗಳನ್ನು ಸಂಗ್ರಹಿಸಲಾಗಿದೆ, ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ತಡರಾತ್ರಿ ಕಾರಿನಲ್ಲಿ ಯುವಕರ ಮೋಜು-ಮಸ್ತಿ: ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರಿಂದ ಕ್ರಮ
ಜಾಲಿ ರೈಡ್ ಪ್ರಕರಣ: ಮರ್ಸಿಡಿಸಿ ಬೆಂಜ್ ಮಾಲೀಕನಿಗೆ ನೋಟಿಸ್ ಜಾರಿ.... - Police issued notice to mercedes-benz