ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ವಿ ಬೀಳಿಸುವಂತೆ ಮಾಡಿದ್ದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಆದರೆ ಮತ್ತೊಂದೆಡೆ ಬೆಂಗಳೂರಿಗೆ ಸ್ಫೋಟದ ಸಂದೇಶವನ್ನು ಅನಾಮಿಕ ರವಾನಿಸಿರುವ ಕಾರಣ ಕಾನೂನು ಸುವ್ಯವಸ್ಥೆ ನಿಯಮ ಉಲ್ಲಂಘನೆಯನ್ನು ಕಿಡಿಗೇಡಿಗಳು ಮಾಡಬಾರದು ಎಂಬ ಕಾರಣಕ್ಕೆ ಪೂರ್ವ ವಿಭಾಗ, ಹಾಗೆಯೇ ಸಿಟಿಯ ಬಹತೇಕ ಸೂಕ್ಷ ಪ್ರದೇಶಗಳ ಬಳಿ ಸದ್ಯ ಕೆಎಸ್ಆರ್ಪಿ, ಆರ್ಎಎಫ್ ತಂಡ ಪಥಸಂಚಲನ ಮಾಡ್ತಿದೆ.
![Police alert in Bangalore as a precautionary measure](https://etvbharatimages.akamaized.net/etvbharat/prod-images/kn-bng-11-policealert-7204498_28082020135236_2808f_1598602956_958.jpg)
ಒಮ್ಮೆ ನಡೆದ ಗಲಭೆ ಅಥವಾ ಯಾವುದಾದರೂ ಅಹಿತಕರ ಘಟನೆ ನಗರದಲ್ಲಿ ಮತ್ತೆ ಮರುಕಳಿಸಬಾರದು. ಹಾಗೆಯೇ ಗಲಭೆ ಸೃಷ್ಟಿ ಮಾಡುವವರಿಗೆ ಖಡಕ್ ಸಂದೇಶ ರವಾನೆ ಮಾಡೋದಕ್ಕಾಗಿ ಹಿರಿಯಾಧಿಕಾರಿಗಳ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಮತ್ತೊಂದೆಡೆ ನಗರದಲ್ಲಿಅನಾಮಿಕನೋರ್ವ ಮೆಸೇಜ್ ಟ್ವೀಟ್ ಮಾಡಿದ ಕಾರಣ ಭದ್ರತೆ ಇನ್ನಷ್ಟು ಹೆಚ್ವಿಸಲಾಗಿದೆ.
ನಗರದಲ್ಲಿ ಅನುಮಾನಾಸ್ಫದವಾಗಿ ಓಡಾಡೋದು ಅಥವಾ ಅನಾಮಿಕ ವಾಹನಗಳು ನಿಂತಿದ್ರೆ ಅದರ ಕುರಿತು ಪೊಲೀಸರು ಅಲರ್ಟ್ ಆಗಿದ್ದಾರೆ. ಹಾಗೆಯೇ ಪೊಲೀಸ್ ಇಲಾಖೆ, ರೈಲ್ವೆ ಇಲಾಖೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.
![Police alert in Bangalore as a precautionary measure](https://etvbharatimages.akamaized.net/etvbharat/prod-images/kn-bng-11-policealert-7204498_28082020135236_2808f_1598602956_760.jpg)
ಸದ್ಯ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ಪ್ರತೀ ಪ್ರಯಾಣಿಕರನ್ನ ಹ್ಯಾಂಡ್ ಹೆಲ್ಟ್ ಮೆಟಲ್ ಡಿಟೆಕ್ಟರ್ ತಪಾಸಣೆ ಮಾಡಿ ಒಳಗಡೆ ಬಿಡ್ತಿದ್ದಾರೆ. ಎಲ್ಲಾ ಪ್ಲಾಟ್ಫಾರ್ಮ್ನಲ್ಲಿ ರ್ಯಾಡಂಮ್ ಆಗಿ ತಪಾಸಣೆ ಮಾಡಿ ಅನುಮಾನಾಸ್ಪಾದ ವ್ಯಕ್ತಿಗಳನ್ನ ವಶಕ್ಕೆ ಪಡೆಯಲು ನಿರ್ಧಾರ ಮಾಡಿದ್ದಾರೆ. ಹಾಗೆಯೇ ಡಾಗ್ ಸ್ಕ್ವಾಡ್ ಕೂಡ ಅಲರ್ಟ್ ಆಗಿ ಮಾಲ್, ಬಸ್ ನಿಲ್ದಾಣದ ಬಳಿ ತಪಾಸಣೆ ನಡೆಸ್ತಿದೆ.