ETV Bharat / city

ಗ್ರಾಹಕರಿಗೆ ಕಣ್ಣೀರು ತರಿಸೋ ಈರುಳ್ಳಿ: ಇ‌ನ್ನು ಎಷ್ಟು ತಿಂಗಳು ಈ ಬೆಲೆ ಇರುತ್ತೆ? - ಎಪಿಎಂಸಿ ಮಾರುಕಟ್ಟೆ

ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಇದೀಗ ಗ್ರಾಹಕರ ಕಿಸೆಗೂ ಕತ್ತರಿ ಹಾಕುತ್ತಿದೆ.

Onion prices continue to high in Karnataka
ಗಗನಕ್ಕೇರಿದ ಈರುಳ್ಳಿ ಬೆಲೆ
author img

By

Published : Nov 26, 2019, 8:50 PM IST

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರಿಗೆ ಈರುಳ್ಳಿ ಹೊಡೆತ ಕೊಟ್ಟರೆ ಗ್ರಾಹಕರಿಗೆ ತಲೆಬಿಸಿ ಉಂಟು ಮಾಡಿದೆ.

ನವೆಂಬರ್​​ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬೆಲೆ ಏರಿಕೆ ಕಂಡಿತು. ಇದೀಗ ಬೆಲೆ ಗಗನಕ್ಕೇರಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 100-120 ಇದೆ. ಕಡಿಮೆ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 60-80 ಇದೆ. ಮುಂದಿನ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುವವರೆಗೂ ಫೆಬ್ರುವರಿವರೆಗೂ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ ಎಂದು ಆಲೂಗಡ್ಡೆ-ಈರುಳ್ಳಿ ವರ್ತಕರ ಸಂಘದ ಸಹ ಕಾರ್ಯದರ್ಶಿ ಪಿ.ಎಸ್. ಶಶಿಧರ್ ಮೂರ್ತಿ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದರು.

ಎಪಿಎಂಸಿ ಮಾರುಕಟ್ಟೆ ಈರುಳ್ಳಿ

ದೇಶದ ಹಲವು ರಾಜ್ಯಗಳಲ್ಲಿ ಉಂಟಾದ ನೆರೆ ಹಾವಳಿಯೇ ಈರುಳ್ಳಿ ಬೆಲೆ ಏರಿಕೆಗೆ ಕಾರಣ. ಆಗ ರಾಜ್ಯದ ಬಾಗಲಕೋಟೆ, ಗದಗ, ಧಾರವಾಡದ ರೈತರೂ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಫಸಲು ಕೈ ಬಂದಿದ್ದ ವೇಳೆ ವಿಪರೀತ ಮಳೆಯಾಯ್ತು. ಆದ್ದರಿಂದ 100 ಕ್ವಿಂಟಾಲ್ ಬೆಳೆಯಲ್ಲಿ ಕೇವಲ 15-30 ಕೆ.ಜಿ ಈರುಳ್ಳಿ ಸಿಕ್ಕಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.

ಇಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿಗೆ ₹ 2000 ರಿಂದ ₹ 8000 ರವರೆಗೂ, ಮಹಾರಾಷ್ಟ್ರದ ಉತ್ತಮ ಗುಣಮಟ್ಟದ ಈರುಳ್ಳಿಗೆ ₹ 8 ಸಾವಿರದಿಂದ ₹ 10,500 ದರದಲ್ಲೂ ಮಾರಾಟವಾಗುತ್ತಿದೆ.

Intro:ಗಗಕ್ಕೇರಿದ ಈರುಳ್ಳಿ ಬೆಲೆ- ಇ‌ನ್ನು ಮೂರು ತಿಂಗಳು ಬೆಲೆ ದುಬಾರಿ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರಿಗೆ ಕೈಸುಟ್ಟಿದ್ದ ಈರುಳ್ಳಿ ಬೆಲೆ ಇದೀಗ ಗ್ರಾಹಕರ ಕಣ್ಣಲ್ಲೂ ನೀರು ತರಿಸುತ್ತಿದೆ. ಹೌದು ನವೆಂಬರ್ ತಿಂಗಳಿಂದ ಆರಂಭವಾದ ಬೆಲೆ ಏರಿಕೆ ಇದೀಗ ಇದ್ದಕ್ಕಿದ್ದಂತೆ ಮತ್ತೆ ಆಕಾಶಕ್ಕೆ ಏರಿದೆ.. ಉತ್ತಮ ಗುಣಮಟ್ಟದ ಈರುಳ್ಳಿಯ ಬೆಲೆ, 100 ರಿಂದ 120 ರೂಪಾಯಿ ಪ್ರತೀ ಕೆ.ಜಿಗೆ ಮಾರಾಟವಾಗುತ್ತಿದೆ. ಕೆಲವೆಡೆ ಕಡಿಮೆ ಗುಣಮಟ್ಟದ ಈರುಳ್ಳಿ 60-80 ಕ್ಕೆ ಮಾರಾಟವಾದರೂ ಸಧ್ಯದಲ್ಲೇ ಅದರ ಬೆಲೆಯೂ ಏರಿಕೆಯಾಗುವ ನಿರೀಕ್ಷೆಯಿದೆ.. ಮುಂದಿನ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುವವರೆಗೂ, ಫೆಬ್ರವರಿ ಹದಿನೈದನೇ ತಾರೀಕಿನವರೆಗೂ ಈರುಳ್ಳಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ಆಲೂಗಡ್ಡೆ-ಈರುಳ್ಳಿ ವರ್ತಕರ ಸಂಘದ ಸಹ ಕಾರ್ಯದರ್ಶಿ
ಪಿ.ಎಸ್ ಶಶಿಧರ್ ಮೂರ್ತಿ ದೂರವಾಣಿ ಮೂಲಕ ಮಾಹಿತಿ ನೀಡಿದರು.
ದೇಶದ ಹಲವೆಡೆ ಉಂಟಾದ ಮಳೆ ಅವಾಂತರದಿಂದ, ಮಹಾರಾಷ್ಟ್ರದಿಂದ ಬರುವ ಈರುಳ್ಳಿಯ ಬೆಲೆಯಲ್ಲೂ ಏರಿಕೆಯಾಗಿದೆ. ರಾಜ್ಯದ ಬಾಗಲಕೋಟೆ, ಗದಗ , ಧಾರವಾಡದ ಈರುಳ್ಳಿ ಬೆಳೆಗಾರರೂ ನಷ್ಟ ಅನುಭವಿಸಿದ್ದರು. ಫಸಲಿನ ವೇಳೆ ವಿಪರೀತ ಮಳೆಯಾಗಿದ್ದರಿಂದ ನೂರು ಕ್ವಿಂಟಾಲ್ ಈರುಳ್ಳಿ ಬೆಳೆಯಲ್ಲಿ ಕೇವಲ ಹದಿನೈದು ,ಮೂವತ್ತು ಕೆಜಿ ಈರುಳ್ಳಿ ಸಿಗುವಂತಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಈರುಳ್ಳಿಗೆ ಎರಡು ಸಾವಿರದಿಂದ ಎಂಟು ಸಾವಿರ ರೂಪಾಯಿಯವರೆಗೆ ಮಾರಾಟವಾಗಿದೆ. ಮಹಾರಾಷ್ಟ್ರದ ಉತ್ತಮ ಗುಣಮಟ್ಟದ ಈರುಳ್ಳಿಗೆ 8 ಸಾವಿರದಿಂದ 10500 ಸಾವಿರ ರೂ ವರೆಗೂ ಮಾರಾಟವಾಗಿದೆ.
ಒಟ್ಟಿನಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಬೆಲೆ ರೈತರಿಗೆ ಕಣ್ಣೀರು ಹಾಕುವಂತೆ ಮಾಡಿದ್ದಲ್ಲದೆ, ಇದೀಗ ಗ್ರಾಹಕರ ಕೈಸುಡುವಂತೆ ಮಾಡಿದೆ...

ಸೌಮ್ಯಶ್ರೀ
Kn_bng_02_onion_price_hike_7202707

Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.