ETV Bharat / city

ರೈತರೊಂದಿಗೊಂದು ದಿನಕ್ಕೆ 1 ವರ್ಷ: ಹಿರೇಕೇರೂರಿನಲ್ಲಿ ನ.14 ರಂದು ಕಾರ್ಯಕ್ರಮ - one-day-along-with-farmers-program

ರೈತರೊಂದಿಗೊಂದು ದಿನಕ್ಕೆ 1 ವರ್ಷ ಒಂದು ವರ್ಷ ತುಂಬಲಿದೆ. ಬಿ.ಸಿ. ಪಾಟೀಲ್​ ಅವರು ಕೃಷಿ ಸಚಿವರಾದ ಬಳಿಕ ರೈತರ ಆತ್ಮಹತ್ಯೆ ತಡೆಗಟ್ಟಿ ಕೋಲಾರ ಮಾದರಿಯ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ರೈತರಲ್ಲಿ ಜಾಗೃತಿ ಮೂಡಿಸಲು ತಮ್ಮ ಜನ್ಮದಿನವಾದ ನ.14ರಂದು ಆರಂಭಿಸಲಾದ ಕಾರ್ಯಕ್ರಮ ಇದಾಗಿದೆ.

one day minister with formers programme
ರೈತರೊಂದಿಗೊಂದು ದಿನಕ್ಕೆ 1 ವರ್ಷ: ಹಿರೇಕೆರೂರಿನಲ್ಲಿ ನ.14 ರಂದು ಕಾರ್ಯಕ್ರಮ
author img

By

Published : Nov 4, 2021, 7:57 PM IST

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಮಹತ್ವಾಕಾಂಕ್ಷೆಯ "ರೈತರೊಂದಿಗೊಂದು ದಿನ" ಕಾರ್ಯಕ್ರಮ ಒಂದು ವರ್ಷ ಪೂರೈಸುತ್ತಿದ್ದು, ಈ ಬಾರಿ ತಮ್ಮದೇ ಕ್ಷೇತ್ರವಾದ ಹಾವೇರಿ ಜಿಲ್ಲೆಯ ಹಿರೇಕೇರೂರಿನಲ್ಲಿ ನ.14ರಂದು ಆಯೋಜನೆ ಮಾಡಲು ಉದ್ದೇಶಿಸಲಾಗಿದೆ.

ಬಿ.ಸಿ. ಪಾಟೀಲ್​ ಅವರು ಕೃಷಿ ಸಚಿವರಾದ ಬಳಿಕ ರೈತರ ಆತ್ಮಹತ್ಯೆ ತಡೆಗಟ್ಟಿ ಕೋಲಾರ ಮಾದರಿಯ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ರೈತರಲ್ಲಿ ಜಾಗೃತಿ ಮೂಡಿಸಲು ತಮ್ಮ ಜನ್ಮದಿನವಾದ ನ.14ರಂದು ಆರಂಭಿಸಲಾದ ಕಾರ್ಯಕ್ರಮ ಇದಾಗಿದೆ.

ಅಂದಿನಿಂದ ಸಚಿವ ಬಿ.ಸಿ. ಪಾಟೀಲ್​ ಅವರು ತಮ್ಮ ಜನ್ಮದಿನವನ್ನು ರೈತರ ಜತೆಗೇ ಆಚರಿಸಿಕೊಳ್ಳುವುದಲ್ಲದೇ, ರೈತರಿಗೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿಕೊಂಡ ಕೃಷಿ ಇಲಾಖೆ ರಾಯಭಾರಿಯಾಗಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಚಿವರಿಂದ ಕಚೇರಿಯಲ್ಲಿ ದೀಪಾವಳಿ ಪೂಜೆ:

ದೀಪಾವಳಿ ಹಬ್ಬದ ಪ್ರಯುಕ್ತ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದರು. ನಾಡಿನ ರೈತರು ಸೇರಿದಂತೆ ಎಲ್ಲರಿಗೂ ಭಗವಂತ ಸನ್ಮಂಗಳವನ್ನುಂಟು ಮಾಡಲಿ ಎಂದು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.