ETV Bharat / city

ಮೊಟ್ಟೆ ಪ್ರಕರಣ: ಬೆಂಗಳೂರಲ್ಲಿ ಮಾಜಿ ಸಿಎಂಗಿಲ್ಲ ಸೂಕ್ತ ಭದ್ರತೆ.. ಬಿಜೆಪಿ ಶಾಸಕರಿಗೆ ಭರ್ಜರಿ ಸುರಕ್ಷತೆ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಹೆಚ್ಚಿನ ಭದ್ರತಾ ವ್ಯವಸ್ಥೆ ಕಂಡು ಬರಲಿಲ್ಲ. ಆದರೆ, ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರಿಗೆ ಶಾಸಕರ ಭವನದಲ್ಲಿ ನೀಡಿರುವ ಕೊಠಡಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ.

no-high-security-to-siddaramaiah-in-benagaluru
ಮೊಟ್ಟೆ ಎಸೆತ ಪ್ರಕರಣ: ಬೆಂಗಳೂರಿನಲ್ಲಿ ಮಾಜಿ ಸಿಎಂಗೆ ಸಿಗದ ಹೆಚ್ಚಿನ ಭದ್ರತೆ, ಬಿಜೆಪಿ ಶಾಸಕರಿಗೆ ಸಿಕ್ತು
author img

By

Published : Aug 20, 2022, 4:51 PM IST

ಬೆಂಗಳೂರು: ಕೊಡಗಿನಲ್ಲಿ ಗುರುವಾರ ನೆರೆ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ನಂತರ ಹೆಚ್ಚಿನ ಭದ್ರತೆ ನೀಡುವುದಾಗಿ ತಿಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಇದಕ್ಕೆ ಸಾಕ್ಷಿಯಂಬಂತ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಮಾಜಿ ಮುಖ್ಯಮಂತ್ರಿಗಳೂ ಆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂಬಂಧ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದರು. ಅಂತೆಯೇ, ಶುಕ್ರವಾರ ಸಿದ್ದರಾಮಯ್ಯ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಆದರೆ, ಬೆಂಗಳೂರಿನಲ್ಲಿಂದು ವಿಶೇಷ ಅಥವಾ ಹೆಚ್ಚಿನ ಭದ್ರತಾ ವ್ಯವಸ್ಥೆ ಕಂಡು ಬರಲಿಲ್ಲ. ಎಂದಿನಂತೆಯೇ ನೀಡುತ್ತಿದ್ದ ಒಂದು ಎಸ್ಕಾರ್ಟ್ ಹಾಗೂ ಒಂದು ಪೈಲಟ್ ಟೀಂ ಮಾತ್ರ ನೀಡಲಾಗಿತ್ತು. ಭದ್ರತೆಗೆ ಒಟ್ಟು 10 ಮಂದಿ ಅಂಗ ರಕ್ಷಕರು ಮಾತ್ರ ಹಾಜರಾಗಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ತೆರಳಿದಾಗ ಮಾತ್ರ ಈ ವಿಶೇಷ ಭದ್ರತೆ ಒದಗಿಸಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ.

no-high-security-to-siddaramaiah-in-benagaluru
ಮೊಟ್ಟೆ ಎಸೆತ ಪ್ರಕರಣ: ಬೆಂಗಳೂರಿನಲ್ಲಿ ಮಾಜಿ ಸಿಎಂಗೆ ಸಿಗದ ಹೆಚ್ಚಿನ ಭದ್ರತೆ, ಬಿಜೆಪಿ ಶಾಸಕರಿಗೆ ಸಿಕ್ತು

ಮಾಜಿ ಸಿಎಂಗೆ ಮೂರು ಬಾರಿ ಬೆದರಿಕೆ ಪತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮೂರು ಬಾರಿ ಬೆದರಿಕೆ ಪತ್ರ ಬಂದಿದೆ. ಇದರ ಜೊತೆ ಮೊನ್ನೆ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಹ ನಡೆದಿದೆ. ಇದರ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಭದ್ರತೆ ನೀಡುವುದಾಗಿ ಹೇಳಿದ್ದರು. ಇದರ ನಂತರವೂ ಸದ್ಯ ಯಾವುದೇ ಅಧಿಕೃತ ಉನ್ನತ ಶ್ರೇಣಿಯ ಭದ್ರತೆಯನ್ನು ನೀಡಿಲ್ಲ.

ಇದೇ ಪರಿಸ್ಥಿತಿ ಮುಂದುವರೆದರೆ ಹಾಗೂ ಮುಂದಿನ ದಿನಗಳಲ್ಲಿ ಅನಾಹುತಗಳಾದರೆ ಅದಕ್ಕೆ ಸರ್ಕಾರ ಹೊಣೆಯಾಗಬೇಕಾಗುತ್ತದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರವಾಸ ಮಾಡುವ ಸಂದರ್ಭದಲ್ಲಿ ಮಾತ್ರವೇ ಹೆಚ್ಚುವರಿ ಭದ್ರತೆಯನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆಯೇ?. ಅಂದರೆ ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಾಯ ಇಲ್ಲ ಎಂದು ಅರ್ಥವೇ ಎಂದು ಕೆಲ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಸೂಚನೆ

ಕೊಡಗು ಜಿಲ್ಲಾ ಪ್ರವಾಸ ವೇಳೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಅಷ್ಟೇ ಅಲ್ಲ, ಭಿತ್ತಿಪತ್ರವನ್ನೂ ಸಿದ್ದರಾಮಯ್ಯ ಅವರ ಕಾರಿನೊಳಗೆ ಎಸೆಯಲಾಗಿತ್ತು. ಇದರ ಭಾರಿ ಭದ್ರತಾ ಲೋಪ ಎಂದು ಆರೋಪಿಸುತ್ತಿರುವ ಕಾಂಗ್ರೆಸ್​ ಮುಖಂಡರು, ಮಾಜಿ ಸಿಎಂ ಭದ್ರತೆ ವಿಚಾರವಾಗಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದೂ ದೂರಿದ್ದಾರೆ.

ಬಿಜೆಪಿ ನಾಯಕರಿಗೆ ಭರ್ಜರಿ ಭದ್ರತೆ: ಇತ್ತ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ದಾಳಿ ಪ್ರಕರಣ ಬಳಿಕ ಕೊಡಗು ಬಿಜೆಪಿ ನಾಯಕರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರಿಗೆ ಬೆಂಗಳೂರಿನ ಶಾಸಕರ ಭವನದಲ್ಲಿ ನೀಡಿರುವ ಕೊಠಡಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಉಭಯ ಶಾಸಕರ ಕೊಠಡಿಗಳಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ ಮುಖ್ಯದ್ವಾರದಲ್ಲಿ ತೀವ್ರ ತಪಾಸಣೆ ನಡೆಸುತ್ತಿರುವ ಪೊಲೀಸರು, ಯಾರೊಬ್ಬರೂ ಮೊಟ್ಟೆ ತೆಗೆದುಕೊಂಡು ಶಾಸಕರ ಭವನದ ಒಳಗೆ ಹೋಗದಂತೆ ಎಚ್ಚರ ವಹಿಸುತ್ತಿದ್ದಾರೆ. ಈಗ ಸಿದ್ದರಾಮಯ್ಯ ಬೆಂಬಲಿಗರು ಪ್ರತಿಯಾಗಿ ಬಿಜೆಪಿ ಶಾಸಕರು ಮತ್ತು ಅವರ ಕೊಠಡಿಗೆ ಮೊಟ್ಟೆ ಎಸೆಯಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಬೊಮ್ಮಾಯಿ, ಆರಗ ಪೋಸ್ಟರ್​​ಗೆ ಮೊಟ್ಟೆ ಎಸೆದ ಕಾಂಗ್ರೆಸ್‌​ ಕಾರ್ಯಕರ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.